ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಂರ್ಗಿಬೈಲು ಕುಂಜತ್ತ ಬೈಲು ಇದರ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆಯಲ್ಲಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಮಂಗಳೂರು ಉತ್ತರದ ಶಾಸಕರು ಡಾ. ವೈ ಭರತ್ ಶೆಟ್ಟಿ ಅವರು ಭಾಗವಹಿಸಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಸರ್ವ ಭಕ್ತರ ಏಕ ಮನಸ್ಸಿನಿಂದ ಸಹಕರಿಸುವಂತೆ ಅಪೇಕ್ಷಿಸಿದರು.
ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ಶ್ರೀ ನಾರಾಯಣ ಮಯ್ಯ, ಜೀರ್ಣೋದ್ಧಾರ ಸಮಿತಿ ಅದ್ಯಕ್ಷರು ಶ್ರೀ ವಿಠಲ ಆಳ್ವ, ಆಡಳಿತ ಮುಕ್ತೇಸರರಾದ ಡಾ ನರೇಶ್ ರೈ ದೆಪ್ಪುಣಿಗುತ್ತು ಕಾರ್ಯಾದ್ಯಕ್ಷರು ಆಶಿಕ್ ಕುಮಾರ್ ಜೈನ್ ಕೂಳೂರು ಬೀಡು, ಶ್ರೀಮತಿ ಮೈನಾ ರೈ ದೆಪ್ಪುಣಿಗುತ್ತು, ಸಂಚಾಲಕರು ಅವಿನಾಶ್ ನಾಯ್ಕ್ ಪಂಜಿಮೊಗರು ಗುತ್ತು, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್, ಕೋಶಾಧಿಕಾರಿ ಶಂಭು ಶೆಟ್ಟಿ, ಶೀತೇಶ್ ಕೊಂಡೆ, ದಿವಾಕರ ಪಕ್ಕಳ, ಜಗದೀಶ್ ಶೆಟ್ಟಿ ಮುರ, ಗೋಪಾಲ ಬಂಗೇರ ,ಅಖಿಲ್ ಶೆಟ್ಟಿ ,ಯೋಗೀಶ್ ಕಿರೋಡಿಯನ್, ಮೋಹನದಾಸ ಕುಂಜತ್ತಬೈಲು ,ನಾಗರಾಜ್ ಶೆಟ್ಟಿ ಕಾರಂಬಾಡಿ,ಚಂದ್ರ ರಾಜ್ ಶೆಟ್ಟಿ, ದಿನೇಶ್ ಕೆ, ಸನತ್ ಕುಮಾರ್ ಶೆಟ್ಟಿ, ಗಣೇಶ್ ಕುಲಾಲ್ ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



