ರಾಮನಗರ: 66/11 ಕೆವಿ ಕೆಂಪನಹಳ್ಳಿ ವಿದ್ಯುತ್ ಉಪಕೇಂದ್ರ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ನಾಮ್‌ಧಾರಿ, ಹೆಗ್ಗಡಗೆರೆ, ಉರಗಹಳ್ಳಿ, ಮಾಯಗಾನಹಳ್ಳಿ, ಎ.ಬಿ.ಎಂ. ಬಿಲ್ಟ್ಟೆಕ್ ಲೇಔಟ್, ಕೆಂಚನಗುಪ್ಪೆ, ಪಾದರಹಳ್ಳಿ, ಚುಂಚಗ ಎನ್.ಜೆ.ವೈ, ಮಾದಾಪುರ, ಕೇತಿಗಾನಹಳ್ಳಿ, ಕೆಂಪನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಸೆ.18ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.