ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದಿದ್ದರು. ಡಿಸಿಸಿ ಬ್ಯಾಂಕ್ ನಾವೇ ಗೆಲ್ಲುತ್ತೇವೆ ಎಂದು ಹವಾ ಮಾಡಿಕೊಂಡು ಹೋಗುವುದಲ್ಲ. ಡಿಸಿಸಿ ಬ್ಯಾಂಕ್ ಯಾರ ಕೈಗೆ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದು ನಿರ್ಧಾರ ಮಾಡುತ್ತಾರೆ ಎಂದು ರಮೇಶ್ ಕತ್ತಿ ಬಾಂಬ್ ಸಿಡಿಸಿದರು.
ಮಂಗಳವಾರ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿ ಯಾರ ಕೈಗೆ ಅಧಿಕಾರ ಕೊಡಬೇಕು. ಜಿಲ್ಲಾದಲ್ಲಿ ಯಾರ ಕೈಗೆ ಅಧಿಕಾರ ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುವುದು ಜನರಿಗೆ ತಿಳಿದಿದೆ. ಬೆಳಗಾವಿ ಜಿಲ್ಲೆಯ ಹಣ ಡಿಸಿಸಿ ಬ್ಯಾಂಕ್ ನಲ್ಲಿದೆ. ಹೆಚ್ಚು ಕಡಿಮೆಯಾದರೆ 50 ಲಕ್ಷ ಜನ ಬೀದಿಗೆ ಬರುತ್ತಾರೆ. ನೇರಾ ನೇರ 50 ಜನರ ಬ್ಯಾಲೆನ್ಸ್ ಮಾಡುವ ಬ್ಯಾಂಕ್ ಉಳಿಸಬೇಕಿದೆ ಎಂದರು.
ಡಿಸಿಸಿ ಬ್ಯಾಂಕ್ ಗೆ ಲೀಡರ್ ಶಿಫ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾರ ಅವಶ್ಯಕತೆ ಇರುವುದಿಲ್ಲ. ಬ್ಯಾಂಕ್ ಸಾಲ ಕೊಟ್ಟ ಸಂದರ್ಭದಲ್ಲಿ ಸೊಸೈಟಿ ಒಳ್ಳೆಯ ಬೆಳವಣಿಗೆಯಾಗುತ್ತದೆ ಎಂದರು.
ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರ ಮತಕ್ಷೇತ್ರದ ವಿದ್ಯುತ್ ಸಹಕಾರ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಯಾವ ಕ್ಷೇತ್ರದಲ್ಲಿ ಅವಿರೋಧ ಮಾಡಬೇಕೋ ಅಥವಾ ಚುನಾವಣೆ ಮಾಡಬೇಕು ಎನ್ನುವುದನ್ನು ಆಯಾ ತಾಲೂಕಿನ ಮುಖಂಡರು, ಹಿತ ಚಿಂತಕರು, ಆಯಾ ತಾಲೂಕಿನ ಜನ ನಿರ್ಧರಿಸುತ್ತಾರೆ. ಭಾಲಚಂದ್ರ ಜಾರಕಿಹೊಳಿ, ರಮೇಶ್ ಕತ್ತಿ ಹೇಳಿದರೆ ಅವಿರೋಧ ಆಯ್ಕೆಯಾಗಲ್ಲ. ಮತದಾರರು ನಿರ್ಧರಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪ್ಯಾನಲ್ ಆಗುವ ಪ್ರಶ್ನೆಯೇ ಬರುವುದಿಲ್ಲ. ನಾನು ಕೇವಲ ಹುಕ್ಕೇರಿ ತಾಲೂಕಿನಿಂದ ಮಾತ್ರ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಬೇರೆಯವರು ತಮ್ಮ ತಮ್ಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡುತ್ತಾರೆ. ಇಲ್ಲಿ ಪ್ಯಾನಲ್ ಎನ್ನುವ ಪ್ರಶ್ನೆಯೇ ಬರುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅವಶ್ಯಕತೆ ಯಾರಾದರೂ ತಾಲೂಕಿನ ಜನರು ಆಹ್ವಾನ ಕೊಟ್ಟರೆ ಹೋಗಿ ಪ್ರಚಾರ ಮಾಡುತ್ತೇನೆ. ಸಾಕಷ್ಟು ತಾಲೂಕಿನ ಜನರು ಕರೆದಿದ್ದಾರೆ. ಯಾವ ತಾಲೂಕಿನವರು ಎಂದು ನಾನು ಹೇಳುವುದಿಲ್ಲ ಎಂದರು. ಡಿಸಿಸಿ ಬ್ಯಾಂಕ್ ಗೆ 9 ಬಾರಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಜನಸೇವೆಯನ್ನು ಮಾಡುವುದೇ ನಮ್ಮ ಕೆಲಸ ಮಾಡಿದ್ದೇವೆ ಎಂದರು.
ಹತ್ತು ಸ್ಥಾನಗಳು ತಮ್ಮೊಟ್ಟಿಗೆ ಇದಾರೆ ಎಂಬ ಸತೀಶ್ ಹೇಳಿಕೆ ಉತ್ತರಿಸಿದ ಅವರು, ಅವರ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದ ಅವರು, ಬ್ಯಾಂಕ್ ನಿಂದ ನಿಮ್ಮನ್ನ ದೂರ ಇಡ್ತಿದ್ದಾರೆ ಎಂಬ ಪ್ರಶ್ನೆಗೆ ದೂರ ಇಡುವುದು ಯಾರು ಕೈಯಲ್ಲಿ ಇಲ್ಲಾ.ಇದು ಅವರ ಅಪ್ಪನ ಆಸ್ತಿ ಅಲ್ಲಾ ಎಂದು ಜಾರಕಿಹೊಳಿ ಅವರಿಗೆ ಕತ್ತಿ ಟಾಂಗ್ ನೀಡಿದರು.



