Thursday, May 29, 2025
Google search engine

Homeರಾಜ್ಯನಾಳೆ ರಾಮ ನವಮಿ ಹಿನ್ನೆಲೆ : ಮಾಂಸ ಮಾರಾಟ ನಿಷೇಧ

ನಾಳೆ ರಾಮ ನವಮಿ ಹಿನ್ನೆಲೆ : ಮಾಂಸ ಮಾರಾಟ ನಿಷೇಧ

ಬೆಂಗಳೂರು: ರಾಮನವಮಿ ಆಚರಣೆಯ ಹಿನ್ನಲೆ ನಾಳೆ ಬುಧವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ರಾಮ ನವಮಿಯ ಕಾರಣ ನಗರದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮ ನವಮಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನಾಂಕದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಜನಿಸಿದ ದಿನ ಇದಾಗಿದೆ ಎನ್ನಲಾಗುವುದು. ರಾಮ ನವಮಿ ಹಬ್ಬವು ಚೈತ್ರ ನವರಾತ್ರಿಯ ಕೊನೆಯ ದಿನವಾಗಿದೆ.

ಚೈತ್ರ ನವರಾತ್ರಿ ರಾಮ ನವಮಿಯೊಂದಿಗೆ ಕೊನೆಗೊಳ್ಳುತ್ತದೆ. ರಾಮನವಮಿಯಂದು ಶ್ರೀರಾಮನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನ ಲೆಕ್ಕಾಚಾರದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ ೧೬ ರಂದು ಮಧ್ಯಾಹ್ನ ೦೧:೨೩ ರಿಂದ ಪ್ರಾರಂಭವಾಗುತ್ತದೆ. ನವಮಿ ತಿಥಿ ಏಪ್ರಿಲ್ ೧೭ ರಂದು ಮಧ್ಯಾಹ್ನ ೦೩:೧೫ ಕ್ಕೆ ಕೊನೆಗೊಳ್ಳುತ್ತದೆ. ಬೆಳಗ್ಗಿನ ವೇಳೆ ತಿಥಿ ಆರಂಭವಾಗುವ ಆಧಾರದ ಮೇಲೆ, ಏಪ್ರಿಲ್ ೧೭ ರಂದು ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular