Thursday, June 18, 2026
Google search engine

Homeರಾಜ್ಯಮೇಕೆದಾಟು ವಿವಾದ : ತಮಿಳುನಾಡು ರಾಜ್ಯಪಾಲರ ಹೊಸ ಆಕ್ಷೇಪ : ಮೇಕೆದಾಟು ಕುರಿತು ಮಾತುಕತೆಗೆ ಸಿದ್ಧ...

ಮೇಕೆದಾಟು ವಿವಾದ : ತಮಿಳುನಾಡು ರಾಜ್ಯಪಾಲರ ಹೊಸ ಆಕ್ಷೇಪ : ಮೇಕೆದಾಟು ಕುರಿತು ಮಾತುಕತೆಗೆ ಸಿದ್ಧ : ಡಿ.ಕೆ. ಶಿವಕುಮಾರ್

ಬೆಂಗಳೂರು : ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಈ ಬಾರಿ ಸ್ವತಃ ಅಲ್ಲಿನ ರಾಜ್ಯಪಾಲರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡು ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ವಿಧಾನಸಭೆಯಲ್ಲಿಯೇ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದು, ಕಾವೇರಿ ನೀರು ಪಡೆಯುವುದು ತಮಿಳುನಾಡಿನ ರೈತರ ಹಕ್ಕಾಗಿದೆ. ಹೀಗಾಗಿ ತಮಿಳುನಾಡು ಸರ್ಕಾರ ಯೋಜನೆ ತಡೆಯಲು ಕಾನೂನು ಹೋರಾಟ ನಡೆಸಬೇಕು ಎಂದವರು ಸಲಹೆ ನೀಡಿದ್ದಾರೆ.

ಮತ್ತೊಂದೆಡೆ ಮೇಕೆದಾಟು ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್​​, ಈ ಬಗ್ಗೆ ತಮಿಳುನಾಡು ಸಿಎಂ ಜೊತೆ ಮಾತುಕತೆಗೆ ನಾನು ಸಿದ್ಧನಿದ್ದೇನೆ. ನಾವೆಲ್ಲರೂ ಭಾರತೀಯರು. ತಮಿಳುನಾಡಿಗೆ ಕೊಡಬೇಕಾದ ನೀರನ್ನು ನಾವು ಕೊಡುತ್ತೇವೆ. ಮೊದಲು ಸಂಗ್ರಹ ಮಾಡಿಕೊಂಡು ಅವರಿಗೆ ನೀರು ಕೊಡ್ತೇವೆ. ನಾವೂ ಬದುಕಬೇಕು, ಅವರೂ ಬದುಕಬೇಕು. ಹೀಗಾಗಿ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಕೊಡುತ್ತೇವೆ. ಅವರ ಅನುಕೂಲತೆ, ನಮ್ಮ ಅನುಕೂಲತೆ ನೋಡಿಕೊಂಡು ನೀರು ನೀಡುತ್ತೇವೆ. ನಾವು ವಿಜಯ್​ಗೆ ಏನು ಮನವಿ ಮಾಡಬೇಕೋ ಮಾಡುತ್ತೇವೆ ಇದರಲ್ಲಿ ರಾಜಕಾರಣ ಏನೂ ಇಲ್ಲ ಎಂದಿದ್ದಾರೆ.

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2025 ನವೆಂಬರ್​​ನಲ್ಲಿ ವಜಾಗೊಳಿಸಿತ್ತು. ಆದರೆ ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಾಯ್ ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ ವಜಾ ಮಾಡಿ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಮರು ಪರಿಶೀಲನಾ ಅರ್ಜಿಯ ವಿಷಯಗಳು ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ತೀರ್ಪಿನ ಪುನರ್ ಪರಿಶೀಲನೆ ಅಗತ್ಯ ಇಲ್ಲ ಎಂದು ಪೀಠ ತಿಳಿಸಿತ್ತು.

RELATED ARTICLES
- Advertisment -
Google search engine

Most Popular