ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂತನವಾಗಿ ಆರಂಭವಾಗಿರುವ ʼರಾಜ್ಯಧರ್ಮʼ ಸುದ್ದಿವಾಹಿನಿ ಮತ್ತು ʼಮೈಸೂರು ವಿಜಯʼ ದಿನಪತ್ರಿಕೆ ಕಛೇರಿಗೆ ಶುಕ್ರವಾರ ಸಂಸ್ಥೆಯ ಸಂಸ್ಥಾಪಕ ಕಿರಣ್ ಕುಮಾರ್ ಸಿ.ಎಂ. ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚನ್ನಸಂದ್ರದ ಸ್ನೇಹಿತರು ಹಾಗೂ ಹಿತೈಷಿಗಳು ಆಗಮಿಸಿ ಶುಭ ಕೋರಿ ದಂಪತಿಗಳನ್ನು ಸನ್ಮಾನಿಸಿದರು.
ಕಛೇರಿಗೆ ಭೇಟಿ ನೀಡಿ ಗ್ರಾಮಸ್ಥರ ಪರವಾಗಿ ಶಿಕ್ಷಕಿ ಕಮಲಮ್ಮ ಸಿ.ಸಿ ಮಾತನಾಡಿ ʼಮೈಸೂರು ಸಾಂಸ್ಕೃತಿಕ ನಗರಿ. ಈ ಸಾಂಸ್ಕೃತಿಕ ನಗರಿಗೆ ಎರಡು ಮುತ್ತುಗಳನ್ನು ಜೋಡಿಸುತ್ತಿದ್ದೇವೆ. ಅದು ʼರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯʼ ದಿನ ಪತ್ರಿಕೆ. ಪತ್ರಿಕೆ ಸ್ಥಾಪನೆ ಮಾಡುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಅದೊಂದು ಜವಾಬ್ದಾರಿಯುತ ಕೆಲಸ. ನ್ಯಾಯ, ನೀತಿ, ಧರ್ಮವನ್ನು ಎತ್ತಿ ಹಿಡಿಯಲು ರಾಜ್ಯಧರ್ಮ ಸ್ಥಾಪನೆಯಾಗಿದೆ. ಟಿಪ್ಪು ಸುಲ್ತಾನ್ ಒಂದು ಮಾತು ಹೇಳಿದ್ದರು. ನೂರು ವರ್ಷ ಇಲಿ ತರ ಬದುಕುವುದಕ್ಕಿಂತ ಮೂರು ವರ್ಷ ಹುಲಿ ತರ ಬದುಕು ಎಂದು. ಅದರಂತೆ ಕಿರಣ್ ಕುಮಾರ್ ಅವರು ಸಾಧನೆ ಮಾಡಿದ್ದಾರೆ.
ಪತ್ರಿಕೆ ಸಮಾಜದ ಪ್ರತಿಬಿಂಬ. ಕಿರಣ್ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಅಗಾಧವಾದ ಅನುಭವವಿದೆ. ಅವರೇ ಮಾಧ್ಯಮವನ್ನು ಹುಟ್ಟು ಹಾಕಿರುವುದು ತುಂಬಾ ಸಂತೋಷದ ವಿಚಾರ. ಈ ಪತ್ರಿಕೆ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗದೇ ಇಡೀ ರಾಜ್ಯದಾದ್ಯಂತ ಪಸರಿಸಲಿ, ಯಶಸ್ಸು, ಕೀರ್ತಿಗಳು ಅವರ ಕೈ ಹಿಡಿಯಲಿʼ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್, ಕದಲೂರು ಜೋಗಿಗೌಡ, ಯೋಗೇಶ್ ಸಿ.ಎಸ್., ರಾಜು ಸಿ.ಎಸ್., ಯೋಗೇಶ್ ಸಿ.ಆರ್., ಮಹೇಶ್ ಮದ್ದೂರು, ಉಪ್ಪಿನಕೆರೆ ಶಿವರಾಮು, ನಾಗರಾಜು ಸಿ.ಪಿ, ಚೆನ್ನವೀರೇಗೌಡ ಸಿ.ಕೆ., ಪೂರ್ಣಿಮಾ ಎಂ.ಪಿ, ಮೀನಾಕ್ಷಿ, ಮಾನಸ, ಶೀಲಾ, ಸೋಮು, ರವಿಚನ್ನಸಂದ್ರ, ಗೌತಮ್, ರೂಪಾ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.