Tuesday, October 14, 2025
Google search engine

Homeರಾಜಕೀಯಸಾಹುಕಾರ‌ರ್ ಗುದ್ದಾಟದಲ್ಲಿ ಹೈಜಾಕ್ ಆತಂಕ..! ಮತದಾರರು ಜಾಲಿ ಜಾಲಿ - ನಿರ್ದೇಶಕರು ಖಾಲಿ ಖಾಲಿ.

ಸಾಹುಕಾರ‌ರ್ ಗುದ್ದಾಟದಲ್ಲಿ ಹೈಜಾಕ್ ಆತಂಕ..! ಮತದಾರರು ಜಾಲಿ ಜಾಲಿ – ನಿರ್ದೇಶಕರು ಖಾಲಿ ಖಾಲಿ.

ವರದಿ: ಸ್ಟೀಫನ್ ಜೇಮ್ಸ್.

ಬೆಳಗಾವಿ: ಜಿಲ್ಲಾ ಸಹಕಾರ ಕ್ಷೇತ್ರದ ಜಾರಕಿಹೊಳಿ ಹಾಗೂ ಕತ್ತಿ ಎರಡೂ ಕುಟುಂಬಗಳ ನಡುವೆ ನಡೆದ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬ್ಯಾಂಕ್ ಚುನಾವಣೆಯ ಸ್ಪಷ್ಟ ಚಿತ್ರಣ ಹೊರ ಬೀಳುವ ಮುನ್ನ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಿಗೆ ಎದೆ ಬಡಿತ ಹೆಚ್ಚಾಗಿದ್ದು, ತಮ್ಮ ಮತದಾರರನ್ನು ಸುರಕ್ಷಿತವಾಗಿ ಇಡಲು ಬೆಳಗಾವಿಯ ಖಾಸಗಿ ಹೋಟೆಲ್ ನಿಂದ ನೆರೆಯ ರಾಜ್ಯಗಳಿಗೆ ಪ್ರವಾಸಕ್ಕೆ ಕಳುಹಿಸಿದ್ದಾರೆ.

ಹೌದು. ಬೆಳಗಾವಿ ಜಿಲ್ಲೆಯ ರಾಜಕಾರಣ-ಕ್ಕೆ ರಾಜ್ಯ ರಾಜಕಾರಣ ಬದಲಿ ಮಾಡುವ ಶಕ್ತಿ ಇದೆ. ಆದರೆ ಜಿಲ್ಲಾ ರಾಜಕಾರಣದಲ್ಲಿ ಯಾರನ್ನು ನಂಬುವುದು ಅಸಾಧ್ಯವಾಗಿದೆ. ಇಂದು ಬೇರೆ ರಾಜಕಾರಣಿಗಳ ಜೊತೆಗೆ ಇದ್ದವರು. ನಾಳೆ ಮತ್ತೊಬ್ಬನ ಆಮಿಷಕ್ಕೆ ಬಲಿಯಾಗಿ ಪಲ್ಟಿಹೊಡೆಯಬಹದು ಎನ್ನುವ ಆಲೋಚನೆಯಿಂದ ಸಾಹುಕಾರರ್ ಪ್ರತಿಷ್ಠೆಯ ಚುನಾವಣೆಯ ಮತದಾರರಿಗೆ ಐಶಾರಾಮಿ ಬಸ್ ನಲ್ಲಿ ನೆರೆಯ ಗೋವಾ ಹಾಗೂ ಮಹಾರಾಷ್ಟ್ರದ ಬಳಿ ಪ್ರವಾಸಕ್ಕೆ ತೆರಳಿದ್ದಾರೆ.

ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಪ್ಯಾನಲ್ ನಲ್ಲಿ 9 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಾರಕಿಹೊಳಿ ಸಾಹುಕಾರರ್ ವಿರೋಧಿ ಬಣದವರು ಜಾತಿ ಟ್ರಂಪ್ ಕಾರ್ಡ್ ಬಳಕೆ ಮಾಡಿಕೊಂಡು ಬಾಕಿ ನಡೆಯಬೇಕಿರುವ ಏಳು ನಿರ್ದೇಶಕರ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ತೋರಬಹುದು ಎನ್ನುವ ಮುಂದಾಲೋಚನೆ ಇಟ್ಟುಕೊಂಡು ಸೋಮವಾರ ಸಂಜೆ-ಯೇ ನಗರದ ಹೊರವಲಯದಲ್ಲಿರುವ ಪ್ರತಿಷ್ಠಿತ ಖಾಸಗಿ ಹೋಟೆಲ್ ನಿಂದ ತಮ್ಮ ಬೆಂಬಲಿತ ಮತದಾರರಿಗೆ ಪ್ರವಾಸ ಕಳುಹಿಸಿ ಚುನಾವಣೆಯ ದಿನದಂದು ಅಂದ-ರೆ ಅ.19 ರಂದು ನೇರವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಮತದಾನಕ್ಕೆ ನೇರವಾಗಿ ಆಗಮಿಸಲಿದ್ದಾರೆ.

ಬಿಡಿಸಿಸಿ ಬ್ಯಾಂಕ್ ನಲ್ಲಿ ಎಲ್ಲರೂ ತಮ್ಮ ತಮ್ಮ ತಂತ್ರಗಾರಿ-ಕೆ ಮಾಡುತ್ತಾರೆ. ನಾವು ನಮ್ಮ ತಂತ್ರಗಾರಿಕೆ ಮಾಡಿದ್ದೇವೆ. ಕೆಲವೊಂದು ಸಾರಿ ಅವರು ಹಿಂಬಾಗಿಲಿನಿಂದ ಮಾಡುತ್ತಾರೆ. ನಾವು ಮಾಡುತ್ತೇವೆ. ನಮ್ಮ ಮತದಾರರು ನಮ್ಮ ಬಳಿ ಇದ್ದಾರೆ.

ಬಾಲಚಂದ್ರ ಜಾರಕಿಹೊಳಿ, ಶಾಸಕ, ಅರಭಾವಿ.

ಸುಧೀರ್ಘ ಸಭೆ ನಡೆಸಿದ ಜಾರಕಿಹೊಳಿ ಪ್ಯಾನಲ್ ಬೆಳಗಾವಿ ನಗರದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಶಶಿಕಲ್ಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಸುಮಾರು 80ಕ್ಕೂ ಅಧಿಕ ಪಿಕೆಪಿಎಸ್‌ ಮತದಾರರ ಗೌಪ್ಯ ಸಭೆ ನಡೆಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

RELATED ARTICLES
- Advertisment -
Google search engine

Most Popular