ಬೆಟ್ಟದಪುರ: ಕೌಲನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘವು 2022-2023ನೇ ಸಾಲಿಗೆ ರೂ.1,65 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಮೈಮಲ್ ವಿಸ್ತರಣಾಧಿಕಾರಿ ಸತೀಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೌಲನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದವತಿಯಿಂದ ಸಿಗುವ ಸೌಲಭ್ಯಗಳನ್ನು ಸಂಘದ ಸದಸ್ಯರುಗಳು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಶುದ್ಧ ಹಾಲು ಉತ್ಪಾದನೆ ಮಾಡುವ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚನ್ನಬಸಪ್ಪ, ಉಪಾಧ್ಯಕ್ಷ ಅಣ್ಣೇಗೌಡ, ನಿರ್ದೇಶಕರಾದ ಅಶೋಕ್, ರಾಜೇಗೌಡ, ರಾಮಕೃಷ್ಣೇಗೌಡ, ರಾಜೇಗೌಡ, ಧನಪಾಲ್, ಕುಮಾರ, ಮಹೇಂದ್ರಚಾರ್, ಗಿರಿಜಾ, ಭಾಗ್ಯಮ್ಮ, ಸಂಘದ ಕಾರ್ಯದರ್ಶಿ ಪುನೀತ್ ಕುಮಾರ್, ಹಾಲು ಪರೀಕ್ಷಕ ಮಧು, ಮುಖಂಡ ಶಿವಣ್ಣೇಗೌಡ ಸೇರಿದಂತೆ ಸಂಘದ ಸದಸ್ಯರು ಇದ್ದರು.