ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಯಲು ತಪಾಸಣಾ ನಡೆಸುತ್ತಿರುವ ಪೊಲೀಸ್, ಅಬಕಾರಿ ಹಾಗೂ ವಿವಿಧ ತಂಡಗಳ ಅಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ೧ ಲಕ್ಷ ರೂ. ಹಣ ಹಾಗೂ ೮.೧೩ ಲಕ್ಷ ರೂ. ಮೌಲ್ಯದ ೨೮೪೦ ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಎಸ್ಎಸ್ಟಿ ತಂಡ ೧ ಲಕ್ಷ ರೂ. ಹಣ ವಶಪಡಿಸಿಕೊಂಡಿದೆ. ಹಾಗೆಯೆ, ಅಬಕಾರಿ ಇಲಾಖೆಯವರು ೮,೧೨,೫೧೦ ರೂ. ಮೌಲ್ಯದ ೨೮೩೭.೮೩ ಲೀಟರ್ ಮದ್ಯ ಹಾಗೂ ಪೊಲೀಸರು ೧೦೦೦ ರೂ. ಮೌಲ್ಯದ ೨.೨೫ ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ೫ ಪ್ರಕರಣಗಳು ದಾಖಲಾಗಿವೆ.