Wednesday, May 21, 2025
Google search engine

Homeರಾಜ್ಯಕೆ ವಿ  ದೊಡ್ಡಿ ಗ್ರಾಮದ ಸಿದ್ದಪ್ಪರವರಿಗೆ ರಾಮಚಂದ್ರಪುರ ಮಠದಿಂದ 1 ಲಕ್ಷ ರೂ. ನೀಡಿ ಸನ್ಮಾನ

ಕೆ ವಿ  ದೊಡ್ಡಿ ಗ್ರಾಮದ ಸಿದ್ದಪ್ಪರವರಿಗೆ ರಾಮಚಂದ್ರಪುರ ಮಠದಿಂದ 1 ಲಕ್ಷ ರೂ. ನೀಡಿ ಸನ್ಮಾನ

ಹನೂರು: 2017 ರಲ್ಲಿ ನಿರಂತರ ಬರದಿಂದ ತೀವ್ರ ಸಂಕಷ್ಟದಲ್ಲಿದ್ದ ಜಾನುವಾರುಗಳಿಗೆ ಗೋಶಾಲೆ ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆ ವಿ  ದೊಡ್ಡಿ ಗ್ರಾಮದ ಸಿದ್ದಪ್ಪರವರಿಗೆ ರಾಮಚಂದ್ರಪುರ ಮಠದ ವತಿಯಿಂದ ಸುಮಾರು 1 ಲಕ್ಷ ರೂ. ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.

 2017ರಲ್ಲಿ ತೀವ್ರ ಬರಗಾಲದ ಹಿನ್ನಲೆ  ರಾಮಚಂದ್ರಪುರ ಮಠ ಹಾಗೂ ಜಾನ್ ಫೌಂಡೇಶನ್ ವತಿಯಿಂದ ಹನೂರು ತಾಲ್ಲೂಕಿನ ಹಲವಡೆ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವನ್ನು ಒದಗಿಸಲಾಗಿತ್ತು.

ಈ ಗೋಶಾಲೆಗಳನ್ನು ತೆರೆಯಲು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಗಲು ಇರಳು ಎನ್ನದೇ ಸುತ್ತಿ ಜಾನುವಾರಗಳ ಗಣತಿ ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಹಾಗೂ ಗೋಶಾಲೆ ತೆರೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ರೈತ ಮುಖಂಡ ಸಿದ್ದಪ್ಪರವರ ಪಾತ್ರ ಪ್ರಮುಖವಾಗಿತ್ತು.

ಈ ದಿಸೆಯಲ್ಲಿ ಶುಕ್ರವಾರದಂದು ರಾಮಚಂದ್ರಪುರ ಮಠದ ಮಂಜುನಾಥ್ ಹೆಗ್ಡೆ ಇವರ ಕಾರ್ಯವನ್ನು ಮೆಚ್ಚಿ ಸುಮಾರು ಒಂದು ಲಕ್ಷ ರೂ ಬಹುಮಾನವನ್ನಾಗಿ‌ ನೀಡಿ ಗೌರವಿಸಿದ್ದಾರೆ.

RELATED ARTICLES
- Advertisment -
Google search engine

Most Popular