ನಂಜನಗೂಡು: ತಾಲ್ಲೂಕಿನ ಶ್ರೀ ಕ್ಷೇತ್ರ ಸುತ್ತೂರು ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ೧೨೦ ಜೋಡಿಗಳು ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಬುಧವಾರ ಮಧ್ಯಾಹ್ನ ೧೨ ಗಂಟೆ ಸಮಯದಲ್ಲಿ ಸುತ್ತೂರು ಜಾತ್ರಾ ಹೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸತಿಪತಿಗಳಾಗಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಂಗಲ್ಯ ಸರವನ್ನು ವರನಿಗೆ ವಿತರಿಸಿದರು. ಗಟ್ಟಿ ಮೇಳದಲ್ಲಿ ತಾಳಿ ಕಟ್ಟಿ ಹೊಸ ಜೀವನಕ್ಕೆ ಕಾಲಿಟ್ಟ ವಧು, ವರರಿಗೆ ಶ್ರೀಗಳು ಶುಭ ಹಾರೈಸಿದರು.
ವೀರಶೈವ ಲಿಂಗಾಯತ ೪, ಪರಿಶಿಷ್ಟ ಜಾತಿ, ೬೧, ಪರಿಶಿಷ್ಟ ಪಂಗಡ ೨೬, ಹಿಂದುಳಿದ ವರ್ಗ ೧೮, ಅಂತರ್ಜಾತಿ ೧೧ ವಿವಾಹವಾಗಿದ್ದಾರೆ. ಇದರಲ್ಲಿ ತಮಿಳು ನಾಡಿನ ೨೩ ಜೋಡಿಗಳು, ವಿಶೇಷ ಚೇತನರು ೪, ಮರು ಮದುವೆ ೧ ಆಗಿದೆ.ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ರಾಮಮೂರ್ತಿ, ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ, ಸ್ವಾಮಿ ಗುರುರತ್ನಂ ಜ್ಞಾನ ತಪಸ್ವಿ, ಸೇರಿದಂತೆ ಹಲವರು ಭಾಗವಹಿಸಿದ್ದರು.