Saturday, December 27, 2025
Google search engine

Homeಸ್ಥಳೀಯರೋಟರಿ ಸಂಸ್ಥೆ ವತಿಯಿಂದ ಡಿ,29 ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನಾಚರಣೆ

ರೋಟರಿ ಸಂಸ್ಥೆ ವತಿಯಿಂದ ಡಿ,29 ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನಾಚರಣೆ

ಹುಣಸೂರು : ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನಾಚರಣೆಯನ್ನು ಹುಣಸೂರು ರೋಟರಿ ಸಂಸ್ಥೆ ವತಿಯಿಂದ ಡಿ,29ರ ಸೋಮವಾರದಂದು 10.30ಕ್ಕೆ ಆಯೋಜಿಸಲಾಗಿದೆ ಎಂದು ರೋಟರಿ ಸಂಸ್ಥೆ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ತಿಳಿಸಿದರು.

ತಾಲೂಕಿನ ರೋಟರಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿರುವ ಕುವೆಂಪುರವರ ಜನ್ಮದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಾಯಕ ಗೌರ್ನರ್ ತಿರುಮಲಾಪುರ ರಾಜೇಗೌಡ ನೆರವೇರಿಸಲಿದ್ದು, ವಿಶ್ರಾಂತ ಪ್ರಾಂಶುಪಾಲ ಮೋದೂರು ಮಹೇಶಾರಾಧ್ಯ ಕುವೆಂಪುರವರ ಜೀವನ ಹಾಗೂ ಸಾಧನೆ ಬಗ್ಗೆ ಮಾತನಾಡಲಿದ್ದಾರೆ. ಕುವೆಂಪು ರವರ ಬಗ್ಗೆ 130 ಕವಿತೆಗಳನ್ನು ರಚಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ತಾಲ್ಲೂಕಿನ ಗ್ರಾಮೀಣ ಯುವ ಪ್ರತಿಭೆ ಕುಡಿನೀರು ಮುದ್ದನಹಳ್ಳಿ ರವಿಯವರನ್ನು ದಿನಾಚರಣೆ ಅಂಗವಾಗಿ ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ರೋಟರಿ ಅದ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಲಯ ಸೇನಾನಿ ಕೆ.ಎಂ.ರಮೇಶ್, ರೋಟರಿ ಶಾಲಾ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ರೋಟರಿ ಕಾರ್ಯದರ್ಶಿ ಶ್ಯಾಮಾಣ್ಣ, ಶಾಲಾ ಮುಖ್ಯ ಶಿಕ್ಷಕಿ ದೀಪ ಭಾಗವಹಿಸಲಿದ್ದಾರೆ.

RELATED ARTICLES
- Advertisment -
Google search engine

Most Popular