Wednesday, February 18, 2026
Google search engine

Homeಸ್ಥಳೀಯMuthoot FinCorp ಹೊಸೂರು ಶಾಖೆಯ 12ನೇ ವಾರ್ಷಿಕೋತ್ಸವ ಆಚರಣೆ

Muthoot FinCorp ಹೊಸೂರು ಶಾಖೆಯ 12ನೇ ವಾರ್ಷಿಕೋತ್ಸವ ಆಚರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಮೂತ್ತೂಟ್ ಪಿನ್ ಕಾರ್ಪ್ ನಿಂದ ವ್ಯಾಪಾರ ಸೇರಿದಂತೆ ವಿವಿಧ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಹೊಸೂರು-ಚುಂಚನಕಟ್ಟೆ ಶಾಖೆಯ ವ್ಯವಸ್ಥಾಪಕ ಹೆಚ್.ಜೆ.ಜಯಶಂಕರ್ ಕೋಟಿ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಮೂತ್ತೂಟ್ ಪಿನ್ ಕಾರ್ಪ್ ನ 12 ನೇ ವರ್ಷದ ವಾರ್ಷಿಕೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಶಾಖೆಯಲ್ಲಿ ಶೇ‌.99 ಪೈಸೆಯಿಂದ 1.50 ರೂ, ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲವನ್ನು ನೀಡಲಾಗುತ್ತಿದ್ದು ಜತಗೆ ದೇಶ ವಿದೇಶಗಳಿಗೆ ಹಣವನ್ನು ವರ್ಗಾವಣೆ ಮಾಡುವುದರ ಜತಗೆ ಗ್ರಾಹಕರಿಗೆ ಆರೋಗ್ಯ ಮತ್ತು ಜೀವ ವಿಮೆಯನ್ನು ಒದಗಿಸಿ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಕಿಶಾನ್ ವಿಕಾಶ್ ಯೋಜನೆಯಡಿ ನೀಡುವ ಸಾಲಕ್ಕೆ 6 ತಿಂಗಳಿಗೆ ಬಡ್ಡಿ ಕಟ್ಟುವ ಅವಕಾಶವನ್ನು ನೀಡಲಾಗಿದ್ದು ಇದರ ಮನೆ ನಿರ್ಮಾಣ ಮಾಡಲು ಮತ್ತು ಕಟ್ಟಿರುವ ಮನೆಗಳಿಗೆ ಸಾಲ ವಿತರಣೆ ಜತಗೆ ಕಂತಿನ ಮೂಲಕ ಚಿನ್ನಾಭರಣ ಕೊಳ್ಳಲು ಅವಕಾಶವನ್ನು ಒದಲಾಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಸದಸ್ಯ ಎಚ್.ಟಿ. ಲೋಕೇಶ್, ಉದ್ಯಮಿಗಳಾದ ಅಮೋಘ, ಹೋಟೇಲ್ ಸಂತು, ಹಾಡ್ಯ ನಿಖಿಲ್ ಕುಮಾರ್, ಎಚ್.ಎಸ್.ದಿಲೀಪ್, ಗ್ರಾಮದ ಯಜಮಾನರಾದ ಪುರುಷೋತ್ತಮ, ಗ್ರಾಹಕರಾದ ಹೊಸಕೊಪ್ಪಲು ನಾಗೇಶ, ಹಳಿಯೂರುರಾಜೇಶ್ ,ಭಾರತಿ, ಮೂಗ ರಾಘವೇಂದ್ರ, ಶಾಖೆಯ ಸಿಬ್ಬಂದಿಗಳಾದ ಎಚ್.ಎಲ್.ಶಶಾಂಕ್, ಕಿರಣ್, ಬಿಂದು, ಅಯನ ಸೇರಿದಂತೆ ಮತ್ತಿತರರು ಹಾಜರಿದ್ದರು

RELATED ARTICLES
- Advertisment -
Google search engine

Most Popular