Saturday, April 11, 2026
Google search engine

Homeಕ್ರೀಡೆಆರ್‌ ಸಿಬಿ ಬೌಲರ್‌ ಗಳ ಬೆವರಿಳಿಸಿದ 15ರ ಪೋರ : ಔಟಾದ ಬಳಿಕ ವೈಭವ್ ಸೂರ್ಯವಂಶಿ...

ಆರ್‌ ಸಿಬಿ ಬೌಲರ್‌ ಗಳ ಬೆವರಿಳಿಸಿದ 15ರ ಪೋರ : ಔಟಾದ ಬಳಿಕ ವೈಭವ್ ಸೂರ್ಯವಂಶಿ ಆಕ್ರೋಶ

ಬೆಂಗಳೂರು : ಐಪಿಎಲ್ 2026ರಲ್ಲಿ ತನ್ನ ಬ್ಯಾಟಿಂಗ್ ಅಬ್ಬರದ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿರುವ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು, ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚುವ ಮೂಲಕ ಆರ್‌ಸಿಬಿ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು.

ಮೈದಾನದಲ್ಲೇ ಬ್ಯಾಟ್ ಅಪ್ಪಳಿಸಿದ ವೈಭವ್!

ವೈಭವ್ ಅವರ ಈ ಬಿರುಸಿನ ಇನಿಂಗ್ಸ್‌ ಗೆ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಬ್ರೇಕ್ ಹಾಕಿದರು. ಆದರೆ ಔಟಾದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಮೈದಾನದಲ್ಲೇ ಬ್ಯಾಟ್ ಅಪ್ಪಳಿಸಿ ತಮ್ಮ ಅಸಮಾಧಾನ ಹೊರಹಾಕಿದರು. ಅವರ ಈ ವರ್ತನೆಗೆ ಕಾರಣವೇನು ಎಂಬ ಕುತೂಹಲಕ್ಕೆ ಪಂದ್ಯದ ನಂತರ ಸ್ವತಃ ವೈಭವ್ ಉತ್ತರ ನೀಡಿದರು.

“ನಾನು ತಂಡದ ಜವಾಬ್ದಾರಿಯನ್ನು ಅರಿತು ಆಡುತ್ತಿದ್ದೆ. ನಾನು ಇನ್ನೂ ಸ್ವಲ್ಪ ಸಮಯ ಕ್ರೀಸ್‌ನಲ್ಲಿದ್ದರೆ ತಂಡಕ್ಕೆ ಮತ್ತಷ್ಟು ರನ್ ಕಾಣಿಕೆ ನೀಡಬಹುದಿತ್ತು ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಕನಿಷ್ಠ ಎರಡು ಓವರ್‌ ಗಳ ಮುನ್ನವೇ ಗುರಿ ತಲುಪಲು ಸಾಧ್ಯವಾಗುತ್ತಿತ್ತು. ಸುಲಭದ ಶಾಟ್ ಆಡಿ ಔಟಾದಾಗ ತಂಡಕ್ಕೆ ನಷ್ಟವಾಗುತ್ತದೆ ಎಂಬ ನೋವಿನಿಂದ ನಾನು ಹಾಗೆ ಪ್ರತಿಕ್ರಿಯಿಸಿದೆ,” ಎಂದು ವೈಭವ್ ಸ್ಪಷ್ಟಪಡಿಸಿದರು.

ಕೈತಪ್ಪಿದ ಅತೀ ವೇಗದ ಶತಕದ ದಾಖಲೆ

ಈ ಪಂದ್ಯದಲ್ಲಿ ವೈಭವ್ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಶತಕ ದಾಖಲಿಸುವ ಸನಿಹದಲ್ಲಿದ್ದರು. ಅವರ ಈ ಸ್ಫೋಟಕ ಇನಿಂಗ್ಸ್‌ ನಲ್ಲಿ 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳಿದ್ದವು. ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ಬೌಲರ್‌ಗಳನ್ನೂ ಲೆಕ್ಕಿಸದೆ ವೈಭವ್ ಬ್ಯಾಟ್ ಬೀಸಿದ್ದು ವಿಶೇಷವಾಗಿತ್ತು.

ಆರೆಂಜ್‌ ಕ್ಯಾಪ್‌ ಈಗ ವೈಭವ್ ಮುಡಿಗೆ!

ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೈಭವ್ ಸೂರ್ಯವಂಶಿ ಅವರು ತಮ್ಮದೇ ತಂಡದ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿ, 2026ರ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಮೂಲಕ ‘ಆರೆಂಜ್ ಕ್ಯಾಪ್’ ಈಗ 15 ವರ್ಷದ ಈ ಪ್ರತಿಭಾವಂತ ಆಟಗಾರನ ಪಾಲಾಗಿದೆ.

ಅತಿ ಚಿಕ್ಕ ವಯಸ್ಸಿನಲ್ಲೇ ದಿಗ್ಗಜ ಕ್ರಿಕೆಟಿಗರಿಗೆ ಸವಾಲಾಗುತ್ತಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್ ಸ್ಟಾರ್ ಆಗುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

RELATED ARTICLES
- Advertisment -
Google search engine

Most Popular