ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ಗಳು ಎಂದೂ ಕೂಡ ಜನ ಸಾಮಾನ್ಯರು ಹಾಗೂ ಬಡವರ ಪರವಾಗಿಯೇ ಇರುತ್ತದೆ. ಅವರು ಮಹಿಳೆಯರು, ನೊಂದವರು, ರೈತರು, ಕಾರ್ಮಿಕರು ಹಾಗೂ ಅಹಿಂದ ವರ್ಗಕ್ಕೆ ಅನ್ಯಾಯ ಮಾಡುವುದಿಲ್ಲಾ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡಗಂಭ ಮಂಜುನಾಥ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ೧೭ನೇ ಬಜೆಟ್ ನಿಂದಲೇ ಎಲ್ಲರಿಗು ಅವರ ಆರ್ಥಿಕ ಶಿಸ್ತು ತಿಳಿಯಲಿದೆ. ಇಲ್ಲಿಯವರೆಗೆ ಬಜೆಟ್ ಮಂಡನೆಯಲ್ಲಿ ದಾಖಲೆ ನಿರ್ಮಿಸಿರುವ ಅವರು ಎಂದು ಕೂಡ ಆರ್ಥಿಕ ಶಿಸ್ತು ಮೀರಲು ಸಾಧ್ಯವಿಲ್ಲಾ ಏಕೆಂದರೇ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ ಎಂದರು.
ಒಬ್ಬ ಹಣಕಾಸು ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವ ಅವರು ಸ್ವತಹಃ ೧೭ ನೇ ಬಜೆಟ್ ಮಂಡನೆ ಮಾಡಿದ್ದು ಅವರು ಮಂಡಿಸಿದ ಜನಪ್ರಿಯ ಬಜೆಟ್ಗಳಿಂದಲೇ ಲೆಕ್ಕರಾಮಯ್ಯ ಎಂಬ ಬಿರುದು ಗಳಿಸಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿರುವುಲ್ಲದೇ ಮಕ್ಕಳಿಗೆ ಮೊಬೈಲ್ ಬ್ಯಾನ್ ಮಾಡಿರುವುದು ಸೂಕ್ತವಾದ ಹಾಗೂ ಎಲ್ಲಾ ಪೋಷಕರು ಒಪ್ಪುವ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.



