ಚಾಮರಾಜನಗರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ ೧೬ ರಿಂದ ಏಪ್ರಿಲ್ ೨ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ಅಕ್ರಮ ಮದ್ಯ ಚಟುವಟುಕೆಗಳನ್ನು ಪತ್ತೆ ಹಚ್ಚಿ ಅಬಕಾರಿ ಕಾನೂನಿನ್ವಯ ಒಟ್ಟು ೧೬೩ (ಘೋರ-೨೧, ಕಲಂ ೧೫(ಎ)-೧೨೪, ಬಿಎಲ್ಸಿ-೧೮) ಮೊಕದ್ದಮೆಗಳನ್ನು ದಾಖಲಿಸಿ. ೪೩೦.೯೨೦ ಲೀ. ಮದ್ಯ, ೬.೮೫೦ ಲೀ. ಬಿಯರ್ ಹಾಗೂ ೧೭ ವಿವಿಧ ವಾಹನಗಳನ್ನು ಜಪ್ತುಪಡಿಸಿ, ೧೩೭ ಆರೋಪಿಗಳನ್ನು ಬಂಧಿಸಲಾಗಿದೆ. ಇವುಗಳ ಒಟ್ಟಾರೆ ಅಂದಾಜು ಮೌಲ್ಯ ೧೯,೯೨,೯೮೯ ರೂ. ಗಳಾಗಿರುತ್ತದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.