Thursday, May 22, 2025
Google search engine

Homeರಾಜ್ಯಲಿಂಗಸೂಗೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ 2.7ರಷ್ಟು ತೀವ್ರತೆಯ ಭೂಕಂಪ

ಲಿಂಗಸೂಗೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ 2.7ರಷ್ಟು ತೀವ್ರತೆಯ ಭೂಕಂಪ

ರಾಯಚೂರು: ಲಿಂಗಸೂಗೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಅ. 23ರ ಮಧ್ಯರಾತ್ರಿ ಲಘು ಭೂಕಂಪವಾಗಿದೆ.

ನಿಲೋಗಲ್, ಹಟ್ಟಿ, ವೀರಾಪುರ ಹಾಗೂ ಗೆಜ್ಜಲಗಟ್ಟ ಗ್ರಾಮಗಳಲ್ಲಿ ಮಧ್ಯರಾತ್ರಿ ಭೂಮಿ ಕಂಪಿಸಿದ ಅನುಭವಾಗಿದೆ.

ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಹಟ್ಟಿ ಗ್ರಾಮದ ಸುತ್ತಲಿನ 2.6 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ.

ಲಘು ಭೂಕಂಪನದಿಂದ ಗ್ರಾಮಗಳಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಈ ರೀತಿಯ ಲಘು ಭೂಕಂಪನದಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ನಿರ್ದೇಶಕರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular