Tuesday, May 20, 2025
Google search engine

Homeಅಪರಾಧಷೇರು ವಹಿವಾಟಿನಲ್ಲಿ ಲಾಭದ ಆಸೆ ತೋರಿಸಿ ೨೧.೭೪ ಲಕ್ಷ ವಂಚನೆ: ದೂರು ದಾಖಲು

ಷೇರು ವಹಿವಾಟಿನಲ್ಲಿ ಲಾಭದ ಆಸೆ ತೋರಿಸಿ ೨೧.೭೪ ಲಕ್ಷ ವಂಚನೆ: ದೂರು ದಾಖಲು

ಮೈಸೂರು : ಶೇರು ವಹಿವಾಟಿನಲ್ಲಿ ಲಕ್ಷಾಂತರ ಲಾಭ ಬಂದಿದೆ ಎಂದು ನಂಬಿಸಿ ವೃದ್ದರೊಬ್ಬರಿಗೆ ೨೧,೭೪,೭೭೩/- ರೂಗಳಿಗೆ ಪಂಗನಾಮ ಹಾಕಿದ ವಂಚನೆ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮೈಸೂರಿನ ಜೆಪಿ ನಗರ ನಿವಾಸಿ ವೆಂಕಟೇಶ್ ಎಂಬುವರೇ ವಂಚನೆಗೆ ಒಳಗಾದವರು. ವಾಟ್ಸ್ ಅಪ್ ಗ್ರೂಪ್ ಒಂದರಲ್ಲಿ ಜಾಯಿನ್ ಆದ ವೆಂಕಟೇಶ್ ವಂಚಕರು ನೀಡಿದ ಸಲಹೆ ಮೇಲೆ ಹಂತ ಹಂತವಾಗಿ ಲಕ್ಷಾಂತರ ಹಣ ತಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ.

ಲಾಭದ ಹಣವನ್ನ ವಿತ್ ಡ್ರಾ ಮಾಡಲು ಮುಂದಾದಾಗ ೩೦% ಕಮೀಷನ್ ಕೇಳಿದ್ದಾರೆ. ಈ ಹಂತದಲ್ಲೂ ೩ ಲಕ್ಷ ಹಣವನ್ನ ಕಮೀಷನ್ ಆಗಿ ನೀಡಿದ್ದಾರೆ. ಪ್ರಾಫಿಟ್ ಹಣ ಡ್ರಾ ಮಾಡಲು ಯತ್ನಿಸಿದಾಗ ಮತ್ತೆ ಎರಡು ಲಕ್ಷ ಕೇಳಿದ್ದಾರೆ. ಆಗ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ. ಒಟ್ಟು ೨೧,೭೪,೭೭೩/- ರೂ ಕಳೆದುಕೊಂಡ ವೆಂಕಟೇಶ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular