ರಾಮನಗರ: ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏ. ೧೬ರ ಬೆಳಿಗ್ಗೆ ೯ ಗಂಟೆಯ ವರೆಗೆ ಒಟ್ಟು ೨೨.೬೬ಲೀ. ಮದ್ಯ ಜಿಲ್ಲೆಯ ವಿವಿಧ ಚೆಕ್‌ಪೋಸ್ಟಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ ೬,೧೭೬ ರೂ. ಮೌಲ್ಯದ ೧೩.೮೪ ಲೀ ಮದ್ಯ ಹಾಗೂ ಒಂದು ವಾಹನ ಹಾಗೂ ಪೊಲೀಸ್ ಕಾರ್ಯಾಚರಣೆ ವೇಳೆ ೮,೮೨೦ ರೂ. ಮೌಲ್ಯದ ೮.೮೨ ಲೀ ಮದ್ಯ ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ.