ಮೈಸೂರು : ಶ್ರೀ ರಾಮ ಜ್ಯೋತಿ ಸೇವಾ ಸಮಿತಿ ವತಿಯಿಂದ ಅಯೋಧ್ಯಾ ಶ್ರೀರಾಮ ಪ್ರತಿಷ್ಠಾಪನೆ ದಿನದ ಅಂಗವಾಗಿ ವೀರನಗೆರೆಯ ಅಶೋಕ ರಸ್ತೆಯಲ್ಲಿ ಇರುವ ವೀರ ಗಣಪತಿ ದೇವಸ್ಥಾನದ ಮುಂಭಾಗ ಲಕ್ಷ ದೀಪೋತ್ಸವ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇತಿಹಾಸ ತಜ್ಞ ಡಾ. ಶಿರ್ವ ಪಿಳ್ಳೈ ಅಯ್ಯಂಗಾರ್ ವೀರನಗೆರೆ ಮೈಸೂರಿನ ಆಸ್ಥಾನದ ವೀರ ಯೋಧರು ಇದ್ದ ಸ್ಥಳ ಅಂದಿನ ಪಿರಿಯಾಪಟ್ಟಣ ಕಾಳಗದಲ್ಲಿ ವೀರನಗೆರೆ ಯೋಧರ ಹೋರಾಟ ಅವಿಸ್ಮರಣೀಯ. ಮಹಾರಾಜರ ಕಾಲದಲ್ಲಿ ಮೈಸೂರಿನ ಪ್ರವೇಶ ದ್ವಾರವೇ ವೀರನಗೆರೆ ಆಗಿತ್ತು ಇದನ್ನು ದಾಟಿಯೇ ಮೈಸೂರಿಗೆ ಆಗಮಿಸಬೇಕಿತ್ತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಾಲ ಪ್ರತಿಭೆ ಡಾ. ಪೃಥು ಪಿ ಅದ್ವೈತ್ ಮಾತನಾಡಿ ಶ್ರೀರಾಮ ಮಂದಿರ ನಮ್ಮ ರಾಷ್ಟ್ರ ಮಂದಿರ, ನಾವೆಲ್ಲ ಶ್ರೀರಾಮನನ್ನು ಪೂಜಿಸಿ, ಧ್ಯಾನಿಸಿ , ಜಪಿಸಿ ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗಾದರೆ ಮಾತ್ರ ರಾಮಮಂದಿರ ಶಾಶ್ವತ ಮಂದಿರವಾಗುತ್ತದೆ ಇಲ್ಲದಿದ್ದರೆ ಹತ್ತು ಹಲವು ಪ್ರವಾಸಿ ಕೇಂದ್ರದಂತೆ ಪ್ರವಾಸಿ ಮಂದಿರವಾಗುತ್ತದೆ. ಒಮ್ಮೆ ರಾಮನಾಮ ಜಪಿಸಿದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ ಫಲ ಬರುತ್ತದೆ ಎಂದು ತಿಳಿಸಿದರು.
ಅರಮನೆ ಪುರೋಹಿತರಾದ ಪ್ರಹ್ಲಾದ ರಾವ್ ಇಲ್ಲಿ ಹಚ್ಚುವ ಪ್ರತಿ ದೀಪವು ಕೇವಲ ಎಣ್ಣೆ ಬತ್ತಿ ಗಳಿಂದ ಬೆಳಗುವುದಿಲ್ಲ ನಮ್ಮೆಲ್ಲರ ರಾಮನ ಭಕ್ತಿ ಮತ್ತು ಶ್ರದ್ಧೆಯಿಂದ ಬೆಳಗುತ್ತಿದೆ. ಇಲ್ಲಿ ಇರುವ ಪ್ರತಿ ಜ್ಯೋತಿಯು ಧರ್ಮ ಜ್ಯೋತಿಯಾಗಿ ನಮ್ಮಲ್ಲಿ ಜ್ಞಾನ ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿರ್ವ ಪಿಳ್ಳೈ ಅಯ್ಯಂಗಾರ್, ಪೃಥು ಪಿ ಅದ್ವೈತ್, ಪ್ರಹ್ಲಾದ್ ರಾವ್, ಅಂಬಾರಿಗೆ ಹೂವಿನ ಅಲಂಕಾರ ಮಾಡುವ ಮಂಜು, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ ಕೂಡ್ಲೂರು, ಸಾಮಾಜಿಕ ಮುಖಂಡ ವಿಕ್ರಂ ಅಯ್ಯಂಗಾರ್, ಹೂವಿನ ಮಂಜಣ್ಣ,
ನಗರ ಬಿಜೆಪಿ ಎಸ್ ಟಿ ಮೋರ್ಚಾ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ, ನಜರ್ಬಾದ್ ನಟರಾಜ್,ವಿನಯ್ ಕುಮಾರ್,
ಶಿವಕುಮಾರ್, ಕುಮಾರ್,ಸು.ಮುರಳಿ, ಎನ್ ಯೋಗಾನಂದ್,
ವೀರನಗೆರೆಯ ಶ್ರೀನಿವಾಸ್,ರಾಜು ,ಶ್ರೀನಿ, ನಕ್ಷತ್ರ ವಿಜಯ್ ಸೇರಿದಂತೆ ನೂರಾರು ರಾಮ ಭಕ್ತರು ಹಾಗೂ ವೀರನಗೆರೆಯ ಪ್ರಮುಖರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.



