ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ : ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಹಾಗಾಗಿ ಈ ವರ್ಷದ ಬಜೆಟ್ ನಲ್ಲೆ 52 ಸಾವಿರ ಕೋಟಿ ಅನುದಾನವನ್ನ ಮೀಸಲಿಡಲಾಗಿದೆ ಎಂದು ಎಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಕ್ರಾಂತಿಕಾರಿ ಕಿಶನ್ ಸೇನೆ ಆಯೋಜಿಸಿದ್ದ 45ನೇ ವರ್ಷದ ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿಲ್ ಚಿಕ್ಕಮಾದು ರವರು ನಮ್ಮದು ಕೂಡ ಕೃಷಿ ಕುಟುಂಬ ನಮ್ಮ ತಂದೆಯವರು ಕೃಷಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದ್ದರು ಹಾಗೆಯೇ ನಾನು ಕೂಡ ಹೆಗ್ಗಡದೇವನ ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ರೈತರಿಗೆ ಪೂರಕವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ, ಕೋಟೆ ಸರಗೂರು ಭಾಗದಲ್ಲಿ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಮುಳ್ಳೂರು ಪಡುಕೋಟೆ ಚೆಕ್ಕೋಡ್ನಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಉಪ ಘಟಕಗಳನ್ನು ತೆರೆಯಲು ಈಗಾಗಲೇ ಕಾರ್ಯನ್ಮುಕರಾಗಿದ್ದೇವೆ, ಮುಂದುವರೆದು ತಾಲೂಕಿನಲ್ಲಿ 220 ವಿದ್ಯುತ್ ಘಟಕ ಸ್ಥಾವರ ಸ್ಥಾಪಿಸಲು 80 ಎಕ್ಕರೆ ಜಮೀನಿನ ಅವಶ್ಯಕತೆಯಿದು, ಜಮೀನಿನನ್ನು ಹುಡುಕಿ ವಿದ್ಯುತ್ ಘಟಕ ತೆರೆಯಲು ಮುಂದಾಗುತ್ತೇವೆ ಇದರಿಂದ 90 ಭಾಗದಷ್ಟು ವಿದ್ಯುತ್ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು, ಹಾಗೆ ಕೃಷಿ ಸಚಿವರ ಜೊತೆ ಮಾತನಾಡಿ ಮುಂದಿನ ವರ್ಷದಿಂದ ರೈತರ ದಿನ ಮತ್ತು ರೈತರ ಹುತಾತ್ಮ ದಿನವನ್ನು ಸರ್ಕಾರದಿಂದಲೇ ಮಾಡುವ ಕುರಿತು ಚರ್ಚಿಸುತ್ತೇನೆ ಎಂದರು.
ನಂತರ ಮಾತನಾಡಿದ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್ ಕುಕುನೂರ್ ರೈತರಲ್ಲಿ ಒಗ್ಗಟ್ಟಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳಿಗೆ ತಡೆ ತಂದಿದ್ದು, ಹಾಗೂ ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಉಳಿಸಿದ್ದು ರೈತ ಸಂಘಟನೆಗಳ ಹೋರಾಟದ ಫಲವೇ ಎಂದರು ರೈತರು ಬದುಕು ಕಟ್ಟಿಕೊಳ್ಳಬೇಕು ರೈತರಿಗೆ ಅನ್ಯಾಯವಾದಾಗ ಸಂಘಟಿತರಾಗಿ ಹೋರಾಟ ಮಾಡಬೇಕು ರೈತರ ಮತ್ತು ಕಾರ್ಯಕರ್ತರ ಬಲವೇ ಸಂಘಟನೆ ಎಂದು ತಿಳಿಸಿದರು.
ರೈತರ ಹುತಾತ್ಮ ದಿನಾಚರಣೆಯನ್ನು ಬೈಕ್ ಟ್ಯಾಕ್ಟರ್ ಗಾಡಿಗಳ ಮೂಲಕ ಗದ್ದಿಗೆ ಸರ್ಕಲ್ ನಿಂದ ಹ್ಯಾಂಡ್ ಪೋಸ್ಟ್ ವರೆಗೆ ಜಾತ ಮಾಡಲಾಯಿತು.

ಗದ್ದಿಗೆ ಸರ್ಕಲ್ ಬಳಿ ಭಾರತೀಯ ಕ್ರಾಂತಿಕಾರಿ ಕಿಶನ್ ಸೇನೆ ರೈತರ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕೇಂದ್ರವು ಶಾಸಕರಾದ ಅನಿಲ್ ಚಿಕ್ಕಮಾದು, ಮಾಜಿ ಸಚಿವರಾದ ಕೋಟೆ ಎಂ ಶಿವಣ್ಣ ತಾಲೂಕು ಅಧ್ಯಕ್ಷರಾದ ಬೂದ್ನೂರ್ ಮಹದೇವ ರಾಜ್ಯ ಯುವ ಘಟಕದ ಅಧ್ಯಕ್ಷರಾದ ರಫಿಉಲ್ಲಾ ಇವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ರಾಜ್ಯ ಯುವ ಘಟಕ ಅಧ್ಯಕ್ಷರಾದ ರಫಿಉಲ್ಲಾ, ಜಿಲ್ಲಾಧ್ಯಕ್ಷ ಗಂಗಾಧರ್, ತಾಲೂಕು ಅಧ್ಯಕ್ಷ ಬೂದನೂರು ಮಾದೇವು, ಸುಬ್ರಮಣಿ, ತಂಜಿಂ, ಶಶಿಕುಮಾರ್, ಗೋವಿಂದ್ ರಾಜ್, ಯಶೋಧ, ಈವನ್ ರಾಜ್, ತಸ್ಲೀಮ್, ಜಯರಾಮೇಗೌಡ, ಕೃಷ್ಣಕುಮಾರ, ಶಿವ ಸೋಮೇಗೌಡ, ಸುಬ್ರಹ್ಮಣ್ಯ, ಶಫಿವುಲ್ಲಾ, ರಾಜ್ಯ ಘಟಕದ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲೂಕು ಘಟಕದ ಪದಾಧಿಕಾರಿಗಳು ಸೇರಿದಂತೆ ರೈತರು ಭಾಗವಹಿಸಿದ್ದರು.