ವರದಿ:ವಿನಯ್ ದೊಡ್ಡಕೊಪ್ಪಲು
ಕೆ. ಆರ್ ನಗರ: ಸಾಲಿಗ್ರಾಮ ತಾಲೂಕಿನ ಯೋಗ ನರಸಿಂಹ ಸ್ವಾಮಿ ಧ್ವನಿವರ್ಧಕ ಶಾಮಿಯಾನ ಮತ್ತು ಲೈಟಿಂಗ್ಸ್ ಮಾಲೀಕರ ಸಂಘದ ವತಿಯಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಖಜಾಂಚಿ ನವರತ್ನ ಕುಮಾರ್ ಸಂಘವು 2022 ರಲ್ಲಿ ಸ್ಥಾಪನೆಯಾಗಿದ್ದು ಸಂಘದಲ್ಲಿ 35 ಮಂದಿ ಸದಸ್ಯರಿದ್ದಾರೆ. ಮುಂಬರುವ ದಿನಗಳಲ್ಲಿ ಸಂಘದ ಸದಸ್ಯರಿಗೆ ಸಂಘದ ವತಿಯಿಂದ ಜೀವವಿಮೆ ಮಾಡಿಸಲು ಆಲೋಚಿಸುತ್ತಿದ್ದು ಸಂಘದ ಸದಸ್ಯರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಿಗೆ ಮತ್ತು ಸಾಲಿಗ್ರಾಮ ತಾಲೂಕಿನ ಅಧ್ಯಕ್ಷ ರಾಜೇಶ್ ಹಾಗೂ ಕೆ ಆರ್ ನಗರ ತಾಲೂಕಿನ ಅಧ್ಯಕ್ಷ ಪ್ರಕಾಶ್ ರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕರ್ಪೂರವಳ್ಳಿ ರಾಜೇಶ್, ಗೌರವಧ್ಯಕ್ಷ ಹರ್ಷವರ್ಧನ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಗಿರೀಶ್, ಖಜಾಂಚಿ ನವರತ್ನ ಕುಮಾರ್, ಕೃಷ್ಣರಾಜನಗರ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ಮಾಜಿ ಅಧ್ಯಕ್ಷ ಕರ್ತಾಳು ಹರೀಶ್, ಸದಸ್ಯರಾದ ಪ್ರಕಾಶ್, ಧರ್ಮ,ಶ್ರೀನಿವಾಸ್, ರವಿ, ಭೈರ ನಾಯಕ, ವಿಷ್ಣು, ಧರ್ಮ, ಪ್ರಸನ್ನ, ದೀಕ್ಷಿತ್, ಚಂದ್ರಚಾರಿ, ಕಿಶೋರ್, ರುದ್ರೇಗೌಡ, ರಾಮಲಿಂಗು ಸೋಮಶೇಖರ್ ಮತ್ತಿತರರು ಹಾಜರಿದ್ದರು.