ಕೊಪ್ಪಳ : ಹಿಂದೂ ಯುವಕ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣದ ಬಗ್ಗೆ ಮಾತಾಡುವ ಭರದಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆ, ಇದೀಗ ಸಂಕಷ್ಟ ತಂದೊಡ್ಡುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಸ್ಲಿಂ ಮುಖಂಡರು ತಿರುಗಿಬಿದ್ದಿದ್ದು, ಕೊಪ್ಪಳದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕೊಪ್ಪಳದಲ್ಲಿ ಮಾತಾಡುವ ಭರದಲ್ಲಿ ಬಸನಗೌಡ ಯತ್ನಾಳ್ ವಿವಾದಿತ ಹೇಳಿಕೆ ನೀಡಿದ್ದರು. ಗವಿಸಿದ್ದಪ್ಪ ಕೊಲೆ ಪ್ರಕರಣ ಸಂಬಂಧ ಆಗಸ್ಟ್ 10 ರಂದು ಕೊಪ್ಪಳಕ್ಕೆ ಬಂದಿದ್ದ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದೇ ಕಾರಣಕ್ಕೆ ಮುಸ್ಲಿಂ ಮುಖಂಡರು ಯತ್ನಾಳ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಬೆಂಗಳೂರು ಮೂಲದ ಅಬ್ದುಲ್ ರಜಾಕ್ ಖಾನ್ ಅನ್ನೋರು ಕೊಪ್ಪಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಂಗ್ರೆಸ್ ಸರಕಾರದಲ್ಲಿ ಮುಸ್ಲಿಂರಿಗೆ ನ್ಯಾಯ ಸಿಗುವುದಿಲ್ಲ. ಪ್ರಕರಣ ದಾಖಲಿಸಿಕೊಂಡ ನಂತರವೇ ನಾನು ಇಲ್ಲಿಂದ ಹೋಗೋದು ಎಂದು ದೂರುದಾರ ಅಬ್ದುಲ್ ರಜಾಕ್ ಪಟ್ಟು ಹಿಡಿದಿದ್ದರು. ಅಲ್ಲದೇ, ಬಸನಗೌಡ ಯತ್ನಾಳ್, ಯಡಿಯೂರಪ್ಪ ಹಾಗು ವಿಜಯೇಂದ್ರರನ್ನೇ ಬಿಟ್ಟಿಲ್ಲ. ಇದೇ ಕಾರಣಕ್ಕೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ಅವರು ಪ್ರವಾದಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೆ, ಯತ್ನಾಳ್ ಹೇಳಿಕೆ ನೀಡಿ 10 ದಿನವಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಅಬ್ದುಲ್ ರಜಾಕ್ ಕಿಡಿಕಾರಿದ್ದಾರೆ.
ಯತ್ನಾಳ್ ಹೇಳಿದ್ದೇನು? ‘’ಯಾರೂ ಮುಸ್ಲಿಂ ಯುವತಿಯರನ್ನು ಪ್ರೀತಿ ಮಾಡಬಾರದಾ ? ಅವರನ್ನು ಮದುವೆ ಆಗಬಾರದೆಂದು ಏಲ್ಲಿದೆ ? ಇನ್ಮುಂದೆ ನಾವು ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂಪಾಯಿ ಕೊಡುತ್ತೇವೆ ಎನ್ನುವ ಅಭಿಯಾನ ಆರಂಭಿಸಲಿದ್ದೇವೆ’ ಎಂದು ಯತ್ನಾಳ್ ಹೇಳಿದ್ದರು.
‘ಕೊಪ್ಪಳದ ಹಿಂದೂ ಯುವಕನ ಕೊ*ಲೆಯಲ್ಲಿ ರಾಜ್ಯ ಸರ್ಕಾರವೂ ಸಾಥ್ ನೀಡಿದೆ. ಕೊ*ಲೆ ಮಾಡಿದ ಯುವಕನ ಕೈಯಲ್ಲಿ ಲಾಂಗ್ ಹಿಡಿಕೊಂಡು ತೋರಿಸಿ ರೀಲ್ಸ್ ಮಾಡಿದ್ದಾನೆ. ಆದರೆ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಆ ಕುಟುಂಬಕ್ಕೆ ನ್ಯಾಯ ಸಿಗುವ ವರೆಗೂ ಹೋರಾಟ ಮಾಡಲಿದ್ದೇವೆ. ಸಿಎಂ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು. ಆ ಕುಟುಂಬಕ್ಕೆ ಪರಿಹಾರ ಕೊಡಬೇಕು. ಯುವಕನ ಕುಟುಂಬಕ್ಕೆ ನ್ಯಾಯ ಸಿಗುವ ವರೆಗೂ ನಾವು ಹೋರಾಟ ಮಾಡಲಿದ್ದೇವೆ’ ಎಂದು ಯತ್ನಾಳ್ ಹೇಳಿದ್ದರು.
‘ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ ಕೊಟ್ರೆ 1.11 ಕೋಟಿ ರೂಪಾಯಿ ಕೊಡುತ್ತೇವೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಮುಸ್ಲಿಂ ಮುಖಂಡರೊಬ್ಬರು ಸವಾಲು ಹಾಕಿದ್ದಾರೆ.
ವಿಜಯಪುರದ ಮುಸ್ಲಿಂ ಮುಖಂಡ ಹಮೀದ್ ಮುಶ್ರಿಫ್ ಎಂಬುವವರು ಯತ್ನಾಳ್‌ಗೆ ಸವಾಲು ಎಸೆದಿದ್ದಾರೆ. ‘ಶಾಸಕ ಯತ್ನಾಳ್ ಕುಟುಂಬದ ಯುವತಿಯನ್ನೇ ಮುಸ್ಲಿಂ ಸಮಾಜದ ಯುವಕನೊಂದಿಗೆ ಮದುವೆ ಮಾಡಿ ಕೊಡಲಿ. ನಾವೇ ಅವರಿಗೆ ಸಮಾಜದ ಪರವಾಗಿ 1 ಕೋಟಿ 11 ಲಕ್ಷ ಕೊಡ್ತೀವಿ’ ಎಂದಿದ್ದಾರೆ.