ಚೆನ್ನೈ: ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯನ್ನು ಸೋಲಿಸಲು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸಲು ತಂತ್ರಗಳನ್ನು ಹೆಣೆಯುವುದು ಸಾಮಾನ್ಯ. ಅದೇ ರೀತಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರನ್ನು ಮಣಿಸಲು ತಂತ್ರ ರೂಪಿಸಲಾಗಿದೆ.
ತಮಿಳುನಾಡಿನ ಮಾಜಿ ಸಿಎಂ ಪನ್ನೀರಸೆಲ್ವಂ ಅವರು ಲೋಕಸಭಾ ಚುನಾವಣೆಗೆ ರಾಮನಾಥಪುರಂ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಪನ್ನೀರಸೆಲ್ವಂ ಎಂದೇ ಹೆಸರಿರುವ ಈತರೆ ನಾಲ್ವರು ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.