Friday, December 12, 2025
Google search engine

Homeದೇಶಭಾರತದ ವಸ್ತುಗಳಿಗೆ 50% ಸುಂಕ : ಮೆಕ್ಸಿಕೋ

ಭಾರತದ ವಸ್ತುಗಳಿಗೆ 50% ಸುಂಕ : ಮೆಕ್ಸಿಕೋ

ಮೆಕ್ಸಿಕೋ ಸಿಟಿ: ಅಮೆರಿಕ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಭಾರತದ ಮೇಲೆ 50% ಸುಂಕ ವಿಧಿಸಲು ಮುಂದಾಗಿದ್ದು, 2026 ರಿಂದ ಭಾರತ, ಚೀನಾ ಸೇರಿದಂತೆ ಏಷ್ಯ ದೇಶಗಳಿಂದ ಬರುವ ಉತ್ಪನ್ನಗಳಿಗೆ 50% ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಮೇಲ್ಮನೆ ಇದೀಗ ಒಪ್ಪಿಗೆ ನೀಡಿದೆ. ಈ ಮಸೂದೆಯ ಪರವಾಗಿ 76, ವಿರುದ್ಧವಾಗಿ 5 ಮಂದಿ ಸದಸ್ಯರು ಮತ ಚಲಾಯಿಸುವ ಮೂಲಕ ಮಸೂದೆ ಪಾಸ್‌ ಆಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಡೊನಾಲ್ಡ್ ಟ್ರಂಪ್ ಅವರ ಅಮೇರಿಕಾ ಫಸ್ಟ್ ಕಾರ್ಯಸೂಚಿಯಂತೆಯೇ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಸ್ಥಳೀಯ ಉದ್ಯಮಕ್ಕೆ ಆದ್ಯತೆ ನೀಡಲು ಏಷ್ಯನ್ ಆಮದುಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುತ್ತಿದ್ದಾರೆ. ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದಿರದ ಏಷ್ಯನ್ ದೇಶಗಳ 1,400 ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ 5% ರಿಂದ 50% ವರೆಗಿನ ಸುಂಕ ವಿಧಿಸುವ ಮಸೂದೆಗೆ ಬುಧವಾರ ದೇಶದ ಸೆನೆಟ್ ಅಂತಿಮ ಅನುಮೋದನೆ ನೀಡಿದ್ದು, ಕೆಳಮನೆಯಿಂದ ಮೊದಲೇ ಅಂಗೀಕರಿಸಲ್ಪಟ್ಟ ಈ ಮಸೂದೆ ಚೀನಾ, ಭಾರತ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳಿಂದ ಬರುವ ಆಟೋ ಭಾಗಗಳು, ಜವಳಿ, ಪ್ಲಾಸ್ಟಿಕ್‌ಗಳು, ಬಟ್ಟೆ ಮತ್ತು ಉಕ್ಕಿನಂತಹ ಸರಕುಗಳ ಮೇಲೆ 50% ವರೆಗೆ ಸುಂಕ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.

ಭಾರತದಿಂದ ಮೆಕ್ಸಿಕೋಗೆ ಸಾಫ್ಟ್‌ವೇರ್, ಔಷಧಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತವೆ. ಮೆಕ್ಸಿಕೊದ ಆರ್ಥಿಕ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಮೆಕ್ಸಿಕನ್ ಮಾರುಕಟ್ಟೆಗೆ ಕಳೆದ ವರ್ಷ ಭಾರತ ಒಟ್ಟು 1.3 ಬಿಲಿಯನ್ ಡಾಲರ್‌ ಮೌಲ್ಯದ ಆಟೋಮೊಬೈಲ್‌ಗಳು, 242 ಮಿಲಿಯನ್‌ ಡಾಲರ್‌ ಮೌಲ್ಯದ ದೂರವಾಣಿಗಳನ್ನು ರಫ್ತು ಮಾಡಿತ್ತು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular