Tuesday, November 4, 2025
Google search engine

Homeರಾಜ್ಯಸುದ್ದಿಜಾಲನವೆಂಬರ್‌ 8 ರಂದು ಶ್ರೀ ಭಕ್ತ ಕನಕದಾಸರ 538ನೇ ಜಯಂತಿ ಮಹೋತ್ಸವ

ನವೆಂಬರ್‌ 8 ರಂದು ಶ್ರೀ ಭಕ್ತ ಕನಕದಾಸರ 538ನೇ ಜಯಂತಿ ಮಹೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಮತ್ತು ದೊಡ್ಡಕೊಪ್ಪಲು ಅವಳಿ ಗ್ರಾಮದಲ್ಲಿ ನವೆಂಬರ್‌ 8 ರಂದು ಶ್ರೀ ಭಕ್ತಕನಕದಾಸರ 538ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗ್ರಾಮದ ಯಜಮಾನ್ ಟಿ.ಪುರುಷೋತ್ತೋಮ್ ಹೇಳಿದರು.

ಚಿಕ್ಕಕೊಪ್ಪಲು- ದೊಡ್ಡಕೊಪ್ಪಲು ಅವಳಿ ಗ್ರಾಮದ ಸಂಗ್ಗೊಳ್ಳಿ ರಾಯಣ್ಣ ಯುವಕರ ಸಂಘದವರು ಆಯೋಜಿಸಿರುವ ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ನಂತರ ಅವರು ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ‌.ರವಿಶಂಕರ್ ವಹಿಸಲಿದ್ದು, ಉದ್ಘಾಟನೆಯನ್ನು ಮಾಜಿ ಜಿ.ಪಂ. ಅಧ್ಯಕ್ಷ ಸಿ.ಜೆ‌.ದ್ವಾರಕೀಶ್ ಮತ್ತು ಪುಷ್ವರ್ಚನೆಯನ್ನು ಮಾಜಿ ಜಿ.ಪಂ.ಸದಸ್ಯ ಅಮಿತ್.ವಿ.ದೇವರಹಟ್ಟಿ ನೇರವರಿಸಲಿದ್ದು ಪ್ರಧಾನ ಭಾಷಣವನ್ನ ಜೆ‌.ಮಹದೇವ್ ಕಲ್ಕುಣಿಕೆ ಮಾಡಲಿದ್ದು ಯುವರಾಜ ಕಾಲೇಜಿನ ಪ್ರಾಧ್ಯಪಕ ಡಾ.ಸಿ‌.ಡಿ.ಪರುಶುಮಾರ್, ಸಾಲಿಗ್ರಾಮ ಠಾಣೆಯ ನಿರೀಕ್ಷಕ ಶಶಿಕುಮಾರ್ ಉಪಸ್ಥಿತಿ ಇರಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಚಿಕ್ಕಕೊಪ್ಪಲು-ದೊಡ್ಡಕೊಪ್ಪಲು- ಕಟ್ಟೆ ಕೊಪ್ಪಲು ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಜತಗೆ ವಿವಿಧ ಸಾಧಕರನ್ನ ಸನ್ಮಾನಿಸಲಾಗುತ್ತದೆ ಎಂದು ಟಿ.ಪುರುಷೋತ್ತಮ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಅಧ್ಯಕ್ಷ ಅರುಣ್ ಕಲ್ಲಹಟ್ಟಿ,
ಯಜಮಾನ್ ಸತ್ಯಪ್ಪ, ಸಿ.ಬಿ.ಸಂತೋಷ್ ಕುಮಾರ್ ಸ್ವಾಮಿ, ಸರ್ವೆಯರ್ ಬಸವರಾಜು, ಅಪ್ಪಾಜಿಗೌಡ, ಶಿವಲಿಂಗಣ್ಣ, ರಾಮಸ್ವಾಮಿ, ಉಮೇಶ್, ದೊಡ್ಡ ಜವರ ನಾಯಕ, ವಾಟರ್ ಮ್ಯಾನ್ ಚೆಲುವರಾಜ್, ಅಭಿ. ನಿತಿನ್. ಮಣಿ, ಕಾರ್ತಿಕ್, ಚಂದು, ರವಿ, ಪುನೀತ್, ಬಾನು ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular