ಮುಂಬೈ: ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ವಿರುದ್ಧ ಆರೋಪ ಕೇಳಿಬಂದಿದೆ
ಮುಂಬೈ ಉದ್ಯಮಿ ದೀಪಕ್ ಕೊಠಾರಿ ಅವರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಈಗ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 2015 ರಿಂದ 2023 ರವರೆಗೆ ಅವರು ಒಟ್ಟು 60.48 ಕೋಟಿ ರೂ. ಹಣ ಹೂಡಿಕೆ ಮತ್ತು ಸಾಲವಾಗಿ ನೀಡಿದ್ದರು. ಆದರೆ, ಈ ಹಣವನ್ನು ವೈಯಕ್ತಿಕ ವೆಚ್ಚಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಅವರ ಒಪ್ಪಂದದ ಪ್ರಕಾರ ವಾರ್ಷಿಕ ಶೇ.12 ಬಡ್ಡಿದರದಲ್ಲಿ 75 ಕೋಟಿ ರೂ. ಸಾಲ ಕೇಳಲಾಗಿತ್ತು. ಆದರೆ ಹೆಚ್ಚು ತೆರಿಗೆಬಾಧೆ ತಪ್ಪಿಸಲು ಆ ಹಣವನ್ನು ಹೂಡಿಕೆ ಎಂದು ಪರಿಗಣಿಸಲು ಒತ್ತಡ ಹೂಡಲಾಗಿದೆ. ಮೊದಲ ಕಂತಿನಲ್ಲಿ 31.95 ಕೋಟಿ ರೂ. ಏಪ್ರಿಲ್ 2015 ರಲ್ಲಿ ನೀಡಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2015 ಮಾರ್ಚ್ ಮತ್ತು 2016 ಮಾರ್ಚ್ ನಡುವೆ 28.54 ಕೋಟಿ ರೂ. ವರ್ಗಾಯಿಸಲಾಗಿದೆ. 2016ರ ಏಪ್ರಿಲ್‌ನಲ್ಲಿ ಶಿಲ್ಪಾ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.