ಕೆ.ಆರ್.ನಗರ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಮೈಮುಲ್ ಆಡಳಿತ ಉಪ ಕಚೇರಿಯಲ್ಲಿ 7.5 ಲಕ್ಷ ಕಳತನವಾಗಿರುವ ಪ್ರಕರಣ ನಡೆದಿದೆ.
ಶನಿವಾರ ಸಂಜೆ ಎಂದಿನಂತೆ ಕೆಲಸ ಮುಗಿಸಿಕಚೇರಿ ಸಿಬ್ಬಂದಿ ಮನೆಗೆ ತೆರಳಿದ ನಂತರ ಸೋಮವಾರ ಬೆಳಗ್ಗೆ ಮತ್ತೆ ಬಂದಾಗ ಕಳ್ಳತನ ನಡೆದಿರುವುದು ಸಹಾಯಕನಿಂದ ಗೊತ್ತಾಗಿದೆ .ಸೋಮವಾರ ಬೆಳಗ್ಗೆ 8 ಗಂಟೆಗ ಕಚೇರಿಗೆ ಬಂದ ಸಹಾಯಕನಿಗೆ ಬೃಹತ್ ಗಾತ್ರದ ರೋಲಿಂಗ್ ಶೆಟ್ಟರ್ ಮೀಟಿ ಕಳ್ಳತನ ಮಾಡಿರುವುದು ಗೊತ್ತಾಗಿ ಕೂಡಲೇ ಆತ ಕಚೇರಿಗೆ ಉಪ ವ್ಯವಸ್ಥಾಪಕ ಪ್ರವೀಣ್ ಪತ್ತಾರ್ ಮತ್ತು ಇತರರಿಗೆ ಸುದ್ದಿ ತಿಳಿಸಿದ್ದಾನೆ.
ಆನಂತರ ಉಪವ್ಯವಸ್ಥಾಪಕರು ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್ ಅವರಿಗೆ ವಿಷಯ ತಿಳಿಸಿದ್ದು ಕೂಡಲೇ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಮುಲ್ ಉಪಕಚೇರಿಯಲ್ಲಿ ಕಳ್ಳತನವಾಗಿರುವ ಬಗ್ಗೆ ಲಿಖಿತವಾಗಿ ದೂರು ಬಂದಿದ್ದು ಈ ಬಗ್ಗೆ ನಾವು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮಾಡುವುದಾಗಿ ತಿಳಿಸಿದರು.



