Monday, November 3, 2025
Google search engine

Homeರಾಜ್ಯಸುದ್ದಿಜಾಲಕೆಸ್ತೂರು ಕೊಪ್ಪಲು ಗೇಟ್‌ನಲ್ಲಿ 7 ಕೋಟಿ ರೂ. ವೆಚ್ಚದ ರಸ್ತೆ ಸುರಕ್ಷತಾ ಕಾಮಗಾರಿ ಪ್ರಾರಂಭ- ಶಾಸಕ.ಡಿ.ರವಿಶಂಕರ್

ಕೆಸ್ತೂರು ಕೊಪ್ಪಲು ಗೇಟ್‌ನಲ್ಲಿ 7 ಕೋಟಿ ರೂ. ವೆಚ್ಚದ ರಸ್ತೆ ಸುರಕ್ಷತಾ ಕಾಮಗಾರಿ ಪ್ರಾರಂಭ- ಶಾಸಕ.ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆಸ್ತೂರು ಕೊಪ್ಪಲು ಗೇಟ್ ಮತ್ತು ಮಳಲಿ ಸರ್ಕಲ್ ಸೇರಿದಂತೆ ಹಾಡ್ಯ ಸರ್ಕಲ್ ಗಳಲ್ಲಿ ಹೆಚ್ಚು ಅಪಘಾತ ಅವಘಡ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಗಾಗಿ 7 ಕೋಟಿ ವೆಚ್ಚದಲ್ಲಿ ರಸ್ತೆ ಸುರಕ್ಷತಾ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ.ಡಿ.ರವಿಶಂಕರ್ ತಿಳಿಸಿದರು.

ತಾಲೂಕಿನ ಕೆಸ್ತೂರು ಕೊಪ್ಪಲು ಗೇಟ್ ನಲ್ಲಿ 7 ಕೋಟಿ ವೆಚ್ಚದ ರಸ್ತೆ ಸುರಕ್ಷಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ರಸ್ತೆ ಸಂಚಾರ ಸುಗಮವಾಗಲು ಸರ್ಕಾರ 18.65 ಕೋಟಿ ಅನುದಾನ ಒದಗಿಸಿದೆ. ಆದ್ದರಿಂದ ಕೆಸ್ತೂರು ಕೊಪ್ಪಲು ಗೇಟ್ ಮತ್ತು ಮಳಲಿ ಸೇರಿದಂತೆ ಹಾಡ್ಯ ಮುಖ್ತ ರಸ್ತೆಯಲ್ಲಿ ಸರ್ಕಲ್ ನಿರ್ಮಾಣ ಮಾಡುವುದರ ಜೊತಗೆ 10 ಮೀಟರ್ ನಷ್ಟು ಡಾಂಬರೀಕರಣ ಮಾಡಲಾಗುವುದು ಎಂದರಲ್ಲದೆ ಗ್ರಾಮದ ಪರಿಮಿತಿಯಲ್ಲಿ ಬಾಕ್ಸ್ ಚರಂಡಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೆಸ್ತೂರು ಕೊಪ್ಪಲು ಗೇಟ್ ಮೂಲಕ ಮಳಲಿ ರಸ್ತೆಗೆ ವರಗೆ 300 ಮೀಟರ್ ರಸ್ತೆ , ಅದೇ ರೀತಿ 250 ಮೀಟರ್ ಚರಂಡಿ ಕಾಮಗಾರಿ ಸೇರಿದಂತೆ ಒಟ್ಟಾರೆಯಾಗಿ ಮೂರು ಕಡೆಗಳಲ್ಲಿ ಸರ್ಕಾಲ್ ನಿರ್ಮಾಣ ಹಾಗೂ ರಸ್ತೆ ವಿಭಜನೆ ಕಾಮಗಾರಿಗೆ
7 ಕೋಟಿ ಪ್ಯಾಕೇಜ್ ನಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.

ಈ ಮೂರು ಸರ್ಕಲ್ ನಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದು ಈ ಬಗ್ಗೆ ಗ್ರಾಮಸ್ಥರ ಮನವಿ ಮೇರೆಗೆ ಸುಗಮ ರಸ್ತೆ ಸಂಚಾರಕ್ಕೆ ಕ್ರಮ ವಹಿಸಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಆದ್ದರಿಂದ ಸುಗ್ಗಿ ಆರಂಭಕ್ಕೂ ಮೊದಲು ಕಾಮಗಾರಿ ಆರಂಭಿಸಿ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವರುಗಳಿಗೆ ಸೂಚಿಸಿದರು.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಎಸ್ಇಪಿ.ಹಾಗೂ ಟಿಎಸ್ಪಿ ಯೋಜನೆಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 25 ಕೋಟಿ ಅನುದಾನ ಸರ್ಕಾರ ನೀಡಿದೆ. ಅದರಂತೆ ಕಸ್ತೂರು ಕೊಪ್ಪಲು ಗೇಟ್ ನಿಂದ ಮಾದಿಹಳ್ಳಿ ವರೆಗೆ 15 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ, ಈಗಾಗಲೇ ಮುಖ್ಯಮಂತ್ರಿಗಳು 50 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಮಾಡಲಾಗಿದ್ದು ಅತಿಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ‌ ಎಂದರು.

ನೀರಾವರಿ ಇಲಾಖೆಯ 15 ಕೋಟಿ ಅನುದಾನದಲ್ಲಿ ಕಟ್ಟೆಪುರ ನಾಲೆಯ ಏರಿ ರಸ್ತೆ, ರಾಮಸಮುದ್ರ ನಾಲೆ ಏರಿ, ಹಳೇ ಕಾಲುವೆ ಏರಿ ರಸ್ತೆಗಳನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಿ ಎಂದು ಹಾರಂಗಿ ನೀರಾವರಿ ಇಲಾಖೆಯ ಎಇಇ ಅಯಾಜ್ ಪಾಷ ಅವರಿಗೆ ಸೂಚನೆ ನೀಡಿದರು.

ಜಿ.ಪಂ.ಮಾಜಿ ಸದಸ್ಯ ಜಯರಾಮೇಗೌಡ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್, ಮಾಜಿ ಅಧ್ಯಕ್ಷ ಮಹದೇವ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ಎಂ.ಜೆ.ರಮೇಶ್,ಕಾಂಗ್ರೆಸ್ ತಾಲ್ಲೂಕು ವಕ್ತಾರ ಜಾಬೀರ್, ಗ್ರಾಮದ ಮುಖಂಡರಾದ ಬಲರಾಮೇಗೌಡ, ರುದ್ರೇಗೌಡ, ಲಕ್ಷ್ಮೇಗೌಡ, ಜಯರಾಮೇಗೌಡ , ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಿರಣ್ಣಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವ್, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಜೆಇ ದೇವರಾಜ್, ಸಿದ್ದೇಶ್ವರ ಪ್ರಸಾದ್, ಪಿಡಿಓ ದಿವ್ಯಜ್ಯೋತಿ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular