Thursday, May 22, 2025
Google search engine

Homeಅಪರಾಧಹೂಡಿಕೆ ಹಣಕ್ಕೆ ಹೆಚ್ಚು ಲಾಭಾಂಶ ನೀಡುವ ಆಸೆ ತೋರಿಸಿ 7 ಲಕ್ಷ ವಂಚನೆ: ದೂರು ದಾಖಲು

ಹೂಡಿಕೆ ಹಣಕ್ಕೆ ಹೆಚ್ಚು ಲಾಭಾಂಶ ನೀಡುವ ಆಸೆ ತೋರಿಸಿ 7 ಲಕ್ಷ ವಂಚನೆ: ದೂರು ದಾಖಲು

ಮೈಸೂರು: ಹೂಡಿಕೆ ಹಣಕ್ಕೆ ಹೆಚ್ಚು ಲಾಭಾಂಶ ನೀಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯನಗರ ಬಡಾವಣೆ ನಿವಾಸಿ ಆದರ್ಶ್ ಅರಸ್ ಹಣ ಕಳೆದುಕೊಂಡವರು.ಸ್ನೇಹಿತರೊಬ್ಬರ ಸಲಹೆ ಮೇರೆಗೆ ಎಲ್ಲಿ ಲಿಲ್ಲಿ ಎಂಬ ಕಂಪನಿಯಲ್ಲಿ ಹಣ ಹೂಡಿದ್ದಾರೆ. ಪ್ರಾರಂಭದಲ್ಲಿ 540/- ರೂ ಪಾವತಿಸಿ ನೊಂದಣಿ ಮಾಡಿಕೊಂಡಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಲಿಂಕ್ ಕಳುಹಿಸಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೂಡಿಕೆ ಹಣಕ್ಕೆ ದಿನ ಶೇ 3%ರಿಂದ 10 % ಹಣ ಲಾಭಾಂಶ ನೀಡುವುದಾಗಿ ಆಮಿಷ ನೀಡಿದ ಕಂಪನಿ ಹಂತಹಂತವಾಗಿ 7,04,26/ ರೂ ಪಡೆದಿದ್ದಾರೆ. ಪ್ರಾರಂಭದಲ್ಲಿ ಸ್ವಲ್ಪ ಹಣ ಲಾಂಭಾಂಶದಂತೆ ನೀಡಿ ನಂತರ ವಂಚನೆ ಮಾಡಿದ್ದಾರೆ.

ಈ ಸಂಬಂದ ಆದರ್ಶ್ ಅರಸ್ ರವರು ಸೆನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular