ಮೈಸೂರು:ಮೈಸೂರು ನಗರ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನಾಗರಿಕ ವೇದಿಕೆಯ ಪೂರ್ಣ ಪ್ರಜ್ಞ ವಿದ್ಯಾ ಕೇಂದ್ರ ಶಾಲೆಯಲ್ಲಿ ದೇಶದ ಸಮಗ್ರತೆ, ಐಕ್ಯತೆಯನ್ನು ಕಾಪಾಡೋಣ, ಎಲ್ಲರೂ ಒಗ್ಗಟ್ಟಿನಿಂದ ದೇಶವನ್ನು ಮುನ್ನಡೆಸೋಣ ಎಂದು 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು. ನಾಗರಿಕ ವೇದಿಕೆಯ ಗೌರವ ಅಧ್ಯಕ್ಷರಾದ ಬಿಪಿ ಪುಟ್ಟಸ್ವಾಮಿ, ಕಾರ್ಯಧ್ಯಕ್ಷರಾದ ಶ್ರೀ ರಂಗಯ್ಯ, ಉಪಾಧ್ಯಕ್ಷರಾದ ಹೆಚ್ ಅರವಿಂದ,ಕಾರ್ಯದರ್ಶಿ ಕುಳ್ಳೇಗೌಡ, ಶಾಲಾ ಸಮಿತಿ ಅಧ್ಯಕ್ಷರಾದ ಜೆ ಲೋಕೇಶ್, ಸದಸ್ಯರಾದ ಎಚ್ ಕೆ ಅಪ್ಪಾಜಿಗೌಡ, ಲಕ್ಷ್ಮಿಗೌಡ, ರೇವಣರಾಜು, ಶೈಲೇಂದ್ರ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು ಮತ್ತು ಸಿಹಿ ವಿತರಿಸಲಾಯಿತು.