ಚಾಮರಾಜನಗರ: ತಾಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಾಚಾರ್ಯರಾದ ಶಿವನಂಜಪ್ಪನವರು ಭಾರತೀಯ ಗಣರಾಜ್ಯೋತ್ಸವ ಭಾರತದ ಸಮಗ್ರತೆ ಹಾಗೂ ಏಕತೆಯ ಸಂಕೇತವಾಗಿದೆ. ದೇಶದ ಶಿಕ್ಷಣ, ವಿಜ್ಞಾನ ,ತಂತ್ರಜ್ಞಾನ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಿ ಮುನ್ನಡೆಯಬೇಕು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸಿಕೊಳ್ಳಬೇಕು ಎಂದರು.
ಹಿರಿಯ ಉಪನ್ಯಾಸಕ ಆರ್ ಮೂರ್ತಿ ಮಾತನಾಡಿ ದೇಶದ ಹೆಮ್ಮೆ ಗಣರಾಜ್ಯೋತ್ಸವವಾಗಿದ್ದು ಸಂವಿಧಾನದ ಮೂಲಕ ಅಭಿವೃದ್ಧಿಯನ್ನು ಸಾಧಿಸಿ ನಾವೆಲ್ಲರೂ ಶ್ರೇಷ್ಠ ಭಾರತವನ್ನಾಗಿ ನಿರ್ಮಿಸುವ ಜವಾಬ್ದಾರಿ ಇದೆ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸೋಣ ಎಂದು ತಿಳಿಸಿ ವಿದ್ಯಾರ್ಥಿಗಳು ದೇಶ ನಡೆದು ಬಂದ ಇತಿಹಾಸವನ್ನು ತಿಳಿಯಬೇಕು ಎಂದರು.
ಇತಿಹಾಸ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತದ ಶಕ್ತಿ ,ಶೌರ್ಯ, ಸಂಸ್ಕೃತಿಯ ಹಿರಿಮೆ ಗರಿಮೆ, ರಾಷ್ಟ್ರೀಯ ಭಾವೈಕ್ಯತೆ ,ಶ್ರೇಷ್ಠ ಮೌಲ್ಯಗಳು ದೇಶದ ಮೂಲ ಮೂಲೆಯ ಸಂಸ್ಕೃತಿಯ ವಿಶೇಷ ಚಿಂತನೆ ಹಾಗೂ ಆಚರಣೆ ರಾಷ್ಟ್ರಕ್ಕಾಗಿ ಅರ್ಪಿಸಿಕೊಂಡ ಮಹಾನ್ ವ್ಯಕ್ತಿಗಳ, ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಗಳನ್ನು ತಿಳಿಯಲು ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಸಾಧನೆ ಮಾಡುವುದು ನಮ್ಮಲ್ಲಿ ಪ್ರೇರಣೆ ನೀಡುತ್ತದೆ, ವಿಜ್ಞಾನ ತಂತ್ರಜ್ಞಾನ ,ಕೃಷಿ ,ಕೈಗಾರಿಕೆ, ಸೈನ್ಯ ಗುಡಿ ಕೈಗಾರಿಕೆ, ರಾಷ್ಟ್ರದ ಸಾಹಸಗಳು ,ಸಂಸ್ಕೃತಿಯ ವಿಶೇಷತೆಗಳು ಪ್ರಜ್ವಲಿಸುವಂತೆ ರಾಷ್ಟ್ರದ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರೀಯ ಮನೋಭಾವನೆ ಮೂಡಲು ದೆಹಲಿ ಹಾಗೂ ಹಳ್ಳಿ ಹಳ್ಳಿಗಳಲ್ಲಿ ನಡೆಯುವ ಗಣರಾಜ್ಯೋತ್ಸವ ಪ್ರೇರಣೆ ನೀಡುತ್ತದೆ ಎಂದರು.
ಉಪನ್ಯಾಸಕರಾದ ಶಿವಸ್ವಾಮಿ, ಬಸವಣ್ಣ ,ರಮೇಶ್, ಶಿವರಾಮು, ಸುರೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.