Tuesday, March 10, 2026
Google search engine

Homeಸ್ಥಳೀಯಮಧ್ಯಪ್ರಾಚ್ಯ ಯುದ್ಧದ ಹೊಡೆತ : ಅಡುಗೆ ಎಣ್ಣೆ ದರ ಜಿಗಿತ

ಮಧ್ಯಪ್ರಾಚ್ಯ ಯುದ್ಧದ ಹೊಡೆತ : ಅಡುಗೆ ಎಣ್ಣೆ ದರ ಜಿಗಿತ

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಸಂಘರ್ಷದ ಪರಿಣಾಮ ಇದೀಗ ಸಾಮಾನ್ಯ ಜನರ ಅಡುಗೆ ಮನೆಗಳವರೆಗೂ ತಲುಪಿದೆ.ಕಳೆದ ಒಂದು ವಾರದಿಂದ ಸದ್ದಿಲ್ಲದೆ ಅಡುಗೆ ಎಣ್ಣೆಯ ಬೆಲೆ ದಿಡೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಎಲ್‌ಪಿಜಿ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆಯಾಗುವ ಆತಂಕವೂ ಹೆಚ್ಚಗುತ್ತಿದೆ.

ಈ ಹಿಂದೆ 750 ಮಿ.ಲೀ. ರುಚಿ ಗೋಲ್ಡ್ ಎಣ್ಣೆ ಪ್ಯಾಕೆಟ್ ರೂ.108ಕ್ಕೆ ಇತ್ತು, ಇದೀಗ ದರ ಸುಮಾರು ರೂ.120ಕ್ಕೆ ಏರಿಕೆಯಾಗಿದೆ. ಮುಂದಿನ ಒಂದು ತಿಂಗಳಲ್ಲಿ ಇದರ ಬೆಲೆ ರೂ.140–150ರವರೆಗೆ ಏರಿಕೆಯಾಗಬಹುದು ಎಂದು ಅಂಗಡಿ ಮಾಲೀಕರು ಅಂದಾಜಿಸಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧದ ಸಮಯದಲ್ಲೂ ಅಡುಗೆ ಎಣ್ಣೆ ದರ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಕೆಲ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಸಂಗ್ರಹಿಸಲು ಮುಂದಾಗಿದ್ದಾರೆ.

ಉತ್ತರ ಕರ್ನಾಟಕದ ಸಣ್ಣ ಹೋಟೆಲ್‌ಗಳಲ್ಲಿ ಪೂರಿ, ವಡೆ, ಬಜ್ಜಿ ಮೊದಲಾದ ತಿಂಡಿಗಳ ತಯಾರಿಕೆಗೆ ಅಡುಗೆ ಎಣ್ಣೆ ಅತ್ಯಗತ್ಯವಾಗಿರುವುದರಿಂದ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.

ರೋಣ ಪಟ್ಟಣದ ಹೋಟೆಲ್ ಮಾಲೀಕ ವೀರೇಶ್ ಪಟ್ಟಾರ ಅವರು ಮಾತನಾಡಿ, “ಮುಂದೆ ಬೆಲೆ ಇನ್ನಷ್ಟು ಏರಬಹುದು ಎಂಬ ಕಾರಣಕ್ಕೆ ವ್ಯಾಪಾರಿಗಳು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಖರೀದಿಸುತ್ತಿದ್ದಾರೆ. ಉಕ್ರೇನ್ ಯುದ್ಧದ ಸಮಯದ ಅನುಭವದಿಂದ ನಾವು ಕೂಡ ಎಣ್ಣೆ ಸಂಗ್ರಹಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular