ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನ ಹೋಟೇಲ್ ವೊಂದರ ಬಳಿ ನಿಲ್ಲಿಸಿದ್ದ ಬಸ್ ನಿಂದ ಚಿನ್ನಾಭರಣ ಕಳವು ನಡೆಸಿದ ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ .
ಮಧ್ಯಪ್ರದೇಶದ ನಿವಾಸಿ ಸಮದ್ ಖಾನ್ (37) ಬಂಧಿತ ಆರೋಪಿ.
2025 ರ ನವೆಂಬರ್ 19 ರಂದು ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿರುವ ಹೋಟೆಲ್ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ ನಲ್ಲಿ ಬ್ಯಾಗಿನೊಳಗೆ ಇರಿಸಲಾಗಿದ್ದ ಬ್ರಹ್ಮಾವರ ಮೂಲದ ದಂಪತಿಗಳು ರೂಪಾಯಿ 20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಆತನನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.



