Wednesday, March 11, 2026
Google search engine

Homeಆರೋಗ್ಯಮುಷ್ಕರ ಹಿಂಪಡೆದ ವೈದ್ಯರು : ಸಂಧಾನ ಯಶಸ್ವಿ

ಮುಷ್ಕರ ಹಿಂಪಡೆದ ವೈದ್ಯರು : ಸಂಧಾನ ಯಶಸ್ವಿ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯಾಧಿಕಾರಿಗಳ ಸಂಘ ಇಂದು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆದುಕೊಂಡಿದೆ. ಖಾಲಿ ಹುದ್ದೆಗಳ ಭರ್ತಿ ಸೇರಿ 14 ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಓಪಿಡಿ ಬಂದ್ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಉಂಟಾಗಬಹುದು ಎಂದು ಎಚ್ಚೆತ್ತ ರಾಜ್ಯ ಸರ್ಕಾರ, ವೈದ್ಯಾಧಿಕಾರಿಗಳ ಸಂಘದ ಜತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. 14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನಿಡಿದೆ. ಈ ಹಿನ್ನೆಲೆಯಲ್ಲಿ ಮಾ. 11ರ ಮುಷ್ಕರವನ್ನು ವೈದ್ಯಾಧಿಕಾರಿಗಳ ಸಂಘ ವಾಪಸ್ ಪಡೆದುಕೊಂಡಿದೆ.

ಮಂಗಳವಾರ ನಡೆದ ಸಂಧಾನ ಸಭೆಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಇಟ್ಟಿರುವ 14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಮುಂದಿನ 3 ತಿಂಗಳಲ್ಲಿ ಎಲ್ಲ ಬೇಡಿಕೆ ಈಡೇರಿಸುವುದಾಗಿ ತಿಳಿಸಿದೆ. ಸರ್ಕಾರದ ಈ ಭರವಸೆಗೆ ವೈದ್ಯಾಧಿಕಾರಿಗಳ ಸಂಘ ಸಹ ಒಪ್ಪಿಕೊಂಡಿದ್ದು, ಇಂದು ಮುಷ್ಕರ ಹಿಂಪಡೆದುಕೊಂಡಿದೆ. ಇದರಿಂದ ರೋಗಿಗಳು ನಿಟ್ಟುಸಿರುಬಿಡುವಂತಾಗಿದೆ.

ಆರೋಗ್ಯ ಸಚಿವರು ಹೇಳಿದ್ದೇನು ?

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಿಎಂ ಸೂಚನೆ ಮೇರೆಗೆ ವೈದ್ಯಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇವೆ. ಸಿಎನ್‌ ಆರ್‌ ಮಾಡುತ್ತೇವೆ ಎಂದು ಹೇಳಿದ್ದೇವೆ. ಜೇಷ್ಠತಾ ಪಟ್ಟಿಯೂ ರೆಡಿ ಇದೆ. ಪಿಜಿ ಕೋರ್ಸ್ ಮಾಡಿ ಎಂದು ಹೇಳಿದ್ದರು ಅದಕ್ಕೂ ಒಪ್ಪಿದ್ದೇವೆ. ಉಳಿದಂತೆ ಹಲವು ವಿಚಾರಗಳನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಔಷಧಿಗಳ ಪೂರೈಕೆಗೆ ಖರೀದಿಗೆ ಹಣ ಕೊಟ್ಟಿದ್ದೇವೆ. ಔಷಧಿಗಳನ್ನು ನಮ್ಮ ಕಡೆಯಿಂದ ಸರಬರಾಜು ಆಗುತ್ತಿದೆ. ಔಷಧಿ ಎಲ್ಲಿಂದ ಬರುತ್ತೆ ಅನ್ನೋದು ಮುಖ್ಯ ಅಲ್ಲ. ಜನರಿಗೆ ಔಷಧಿ ಸಿಗಬೇಕು, ಎಲ್ಲದಕ್ಕೂ ಅವರೂ ಒಪ್ಪಿದ್ದಾರೆ. ಬಹುತೇಕ ಎಲ್ಲಾ ಬೇಡಿಕೆ ಈಡೇರಿಸುವುದರ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular