Saturday, March 14, 2026
Google search engine

Homeರಾಜ್ಯಪಿವಿಎಸ್ ಸಂಸ್ಥೆಯ ಆಡಳಿತದಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ: ಪಿವಿಎಸ್ ಗ್ರೂಪ್ ನ ಅಧ್ಯಕ್ಷೆ ಸರೋಜಿನಿ ಎಂ. ಕುಶೆ...

ಪಿವಿಎಸ್ ಸಂಸ್ಥೆಯ ಆಡಳಿತದಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ: ಪಿವಿಎಸ್ ಗ್ರೂಪ್ ನ ಅಧ್ಯಕ್ಷೆ ಸರೋಜಿನಿ ಎಂ. ಕುಶೆ ಸ್ಪಷ್ಟನೆ

ಮಂಗಳೂರಿನ ಪಿವಿಎಸ್ ಸಂಸ್ಥೆಯ ಆಡಳಿತವನ್ನು ತಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸರೋಜಿನಿ ಎಂ. ಕುಶೆ ಹೇಳಿಕೆಯನ್ನು ಅವರ ಪರವಾಗಿ ವೈಶ್ಯ ಎಜುಕೇಶನ್ ಸೊಸೈಟಿಯ ಸಂತೋಷ್ ಚಂದ್ರ ಹೇಳಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸರೋಜಿನಿ ಎಂ. ಕುಶೆ ಅವರ ಅಭಿಪ್ರಾಯವನ್ನು ತಿಳಿಸುತ್ತಾ , ‘ನಮ್ಮ ಜೊತೆಯಲ್ಲಿದ್ದು, ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳು ನಮ್ಮ ಸಂಸ್ಥೆ ಹಾಗೂ ಆಸ್ತಿಪಾಸ್ತಿ ಕಬಳಿಸುವ ದುರುದ್ದೇಶದಿಂದ ಕೃಷ್ಣದತ್ತ ಎಂಬ ವ್ಯಕ್ತಿಯಿಂದ ನಮಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ನಾನು ನ್ಯಾಯಾಲಯದ ಮೊರೆ ಹೋಗಿ ಕೃಷ್ಣದತ್ತ ನನ್ನ ಮಗನಲ್ಲ ಎಂಬ ತಡೆಯಾಜ್ಞೆ ತಂದಿದ್ದೇನೆ. ಸರಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೃಷ್ಣದತ್ತ ಹಾಗೂ ಆತನ ಸಹಚರರ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ತನ್ನ ನ್ಯಾಯಯುತ ಹೋರಾಟದಲ್ಲಿ ಸಹಕಾರ ನೀಡಬೇಕೆಂದು ಹೇಳಿದರು.
ನನ್ನ ಅಜ್ಜ ದಿವಂಗತ ಪುತ್ತು ವೈಕುಂಠ ಶೇಟ್ ಅವರ ಪತ್ನಿಯ ತಂಗಿಯ ಮಗಳಾದ ವಸಂತಿ ಎಚ್. ಅವರ ಬಾಲ್ಯದಿಂದ ನಮ್ಮ ಜೊತೆಯಲ್ಲಿದ್ದು, ನನ್ನ ಪತಿ ಮೃತಪಟ್ಟ ನಂತರ ತನ್ನ ಹೆಗಲಿಗೆ ಹೆಗಲು ನೀಡಿ ಪಿವಿಎಸ್ ಕಂಪೆನಿಗಳನ್ನು ನಾವಿಬ್ಬರೂ ಜೊತೆಗೂಡಿ ಮುನ್ನಡೆಸುತ್ತಾ ಅವರು
ಬರುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿವಿಎಸ್ ಗ್ರೂಪ್‌ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸರೋಜಿನಿ ಎಂ. ಕುಶೆ, ಅರ್ಚಕರಾದ ಜಯರಾಂ ಭಟ್, ಅಶೋಕ್ ಭಟ್, ಗೋಪಿ ಶೇಟ್, ಪ್ರವೀಣ್ ನಾಗ್ವೇಕರ್ ಉಪಸ್ಥಿತರಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular