ಬೆಳ್ತಂಗಡಿಯ ಶಿಬಾಜೆಯ ಶ್ರೀಧರ ಕೊಲೆ ಪ್ರಕರಣದ ದೂರುದಾರನಾಗಿದ್ದ ಹರೀಶ್ ಮೊಗೇರ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿಲ್ಲ. ಆಕಸ್ಮಿಕವಾಗಿ ಮದ್ಯದ ಬಾಟ್ಲಿಯೆಂದು ವಿಷ ಸೇವಿಸರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ. 11.03.2026 ರಂದು ಬೆಳ್ತಂಗಡಿ ಶಿಬಾಜೆ ನಿವಾಸಿ ಹರೀಶ್ ಮುಗೇರ ಎಂಬವರು ಅನಾರೋಗ್ಯಕ್ಕೀಡಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ವೈದ್ಯಕೀಯ ಸೂಚನಾಪತ್ರ ಬಂದ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ವಿಚಾರಿಸಿ, ಪೊಲೀಸರು ವಿಡಿಯೋ ಹೇಳಿಕೆ ದಾಖಲಿಸಿದ್ದಾರೆ. ಅದರಂತೆ ಆತ ಮನೆಯಲ್ಲಿ ತಂದಿರಿಸಿದ್ದ ಮದ್ಯವನ್ನು, ಸೇವಿಸುವುದಕ್ಕಾಗಿ ರಾತ್ರಿ ತೆಗೆಯುವಾಗ ಕಣ್ತಪ್ಪಿನಿಂದ ಸದ್ರಿ ಮದ್ಯದ ಬಾಟಲಿಯ ಬಳಿಯಿದ್ದ ಕೀಟನಾಶಕವನ್ನು ತೆಗೆದು ಸೇವಿಸಿರುವುದಾಗಿದೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರು ಆದಾಗ ತನ್ನ ಪತ್ನಿ ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾನು ಮದ್ಯದ ಬದಲು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿದ್ದು, ಆದ್ದರಿಂದ ಈ ಬಗ್ಗೆ ಯಾವುದೇ ಕಾನೂನು ಕ್ರಮದ ಅಗತ್ಯವಿರುವುದಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ವ್ಯಕ್ತಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ, ಜಿಲ್ಲಾ ವೈದ್ಯಾಧಿಕಾರಿಯವರಿಗೆ ಕೋರಲಾಗಿದೆ. ಆತನ ಮುಂದಿನ ಹೇಳಿಕೆಯ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣ್ತಪ್ಪಿನಿಂದ ಮದ್ಯದ ಬದಲು ಕೀಟನಾಶಕ ಸೇವಿಸಿ ಆಸ್ಪತ್ರೆ ಸೇರಿದ ದೂರುದಾರ.!
RELATED ARTICLES



