Monday, March 16, 2026
Google search engine

Homeಸ್ಥಳೀಯಗ್ಯಾಸ್ ಸಿಲಿಂಡರ್ ಅಭಾವದ ಹಿನ್ನೆಲೆ ಸ್ಥಗಿತಗೊಂಡಿದ್ದ ಬಿಳಿಗಿರಿರಂಗನ ಬೆಟ್ಟದಲ್ಲಿ ದಾಸೋಹ ಮತ್ತೆ ಆರಂಭ

ಗ್ಯಾಸ್ ಸಿಲಿಂಡರ್ ಅಭಾವದ ಹಿನ್ನೆಲೆ ಸ್ಥಗಿತಗೊಂಡಿದ್ದ ಬಿಳಿಗಿರಿರಂಗನ ಬೆಟ್ಟದಲ್ಲಿ ದಾಸೋಹ ಮತ್ತೆ ಆರಂಭ

ಚಾಮರಾಜನಗರ : ಗ್ಯಾಸ್ ಸಿಲಿಂಡರ್ ಕೊರತೆ ಕಾರಣದಿಂದ ಒಂದು ದಿನದ ಮಟ್ಟಿಗೆ ದಾಸೋಹ ಸ್ಥಗಿತಗೊಂಡಿತ್ತು. ಸಮಸ್ಯೆಗೆ ಗ್ಯಾಸ್ ಏಜೆನ್ಸಿಗಳು ಸ್ಪಂದಿಸಿದ್ದರಿಂದ, ದೇವಾಲಯಕ್ಕೆ ಅಗತ್ಯ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಾಗಿದೆ. ಬಿಳಿಗಿರಿರಂಗನ ಸನ್ನಿಧಿಯಲ್ಲಿ ದಾಸೋಹ ಮತ್ತೆ ಪುನರಾರಂಭಗೊಂಡಿದೆ.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿದವು. ದಾಳಿಯ ಮೊದಲ ದಿನವೇ ಇರಾನ್ ಸುಪ್ರೀಂ ನಾಯಕ ಅಲಿ ಖಮೇನಿ ಹತ್ಯೆಯಾಯಿತು. ಈ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದೆ. ಪ್ರತೀಕಾರವಾಗಿ ಇರಾನ್, ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಹಲವಾರು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿದೆ.

ಸಂಘರ್ಷದಿಂದ ಪ್ರಮುಖ ಜಾಗತಿಕ ಇಂಧನ ಕಾರಿಡಾರ್ ಆಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಅಡ್ಡಿಪಡಿಸಿದೆ. ಇದು ಅಂತರರಾಷ್ಟ್ರೀಯ ತೈಲ ಸರಬರಾಜು, ಇಂಧನ ಮಾರುಕಟ್ಟೆಗಳು ಮತ್ತು ಜಾಗತಿಕ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಅಗತ್ಯ ಪ್ರಮಾಣದ ಎಲ್‌ಪಿಜಿ ಭಾರತಕ್ಕೆ ಆಮದಾಗದೇ ಅಭಾವ ಸೃಷ್ಟಿಯಾಗಿದೆ. 

RELATED ARTICLES
- Advertisment -
Google search engine

Most Popular