Monday, March 16, 2026
Google search engine

Homeರಾಜ್ಯಪ್ರತಿ ಜಿಲ್ಲೆಗೆ ಕ್ಯಾನ್ಸರ್ ಆಸ್ಪತ್ರೆ: ಮೈಸೂರು, ತುಮಕೂರಲ್ಲಿ ಶೀಘ್ರ ಆರಂಭ

ಪ್ರತಿ ಜಿಲ್ಲೆಗೆ ಕ್ಯಾನ್ಸರ್ ಆಸ್ಪತ್ರೆ: ಮೈಸೂರು, ತುಮಕೂರಲ್ಲಿ ಶೀಘ್ರ ಆರಂಭ

ಬೆಂಗಳೂರು : ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಆರತಿರಾವ್ ಪ್ರಶ್ನೆ ಕೇಳಿದ್ರು. ಇದಕ್ಕೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ಮೈಸೂರು, ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಆಗ್ತಿದೆ. ಕಟ್ಟಡ ಸಂಪೂರ್ಣ ಆಗಿ, ಉದ್ಘಾಟನೆ ಆಗಿದೆ. ಎಕ್ಯುಪ್‌ಮೆಂಟ್ ಟೆಂಡರ್ ಕರೆಯಲಾಗಿದೆ. ಹುದ್ದೆಯ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ. ಸಿಎಂ ಅವರು ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಘೋಷಣೆ ಮಾಡಿದ್ದಾರೆ. ಅದರಂತೆ ಪ್ರತಿ ರಾಜ್ಯದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡ್ತೀವಿ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಾಡುತ್ತಿದ್ದೇವೆ. ಶಿವಮೊಗ್ಗದಲ್ಲಿ ಕೋರ್ಟ್ ಕೇಸ್‌ನಿಂದ ಸಮಸ್ಯೆ ಆಯ್ತು. ಈಗ ಕೋರ್ಟ್ ಕೇಸ್ ಮುಗಿದಿದೆ. ಆದಷ್ಟೂ ಬೇಗ ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭ ಮಾಡ್ತೀವಿ. ಸರ್ವಿಕಲ್ ಕ್ಯಾನ್ಸರ್‌ಗೆ ವ್ಯಾಕ್ಸಿನ್ ಕೊಡುವ ಕೆಲಸ ಆರೋಗ್ಯ ಇಲಾಖೆ ಮಾಡ್ತಿದೆ. ಇದರ ಬಗ್ಗೆ ಜಾಗೃತಿ ಮುಡಿಸೋ ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ.

ಇದೇ ವೇಳೆ ಜೆಡಿಎಸ್ ಜವರಾಯಿಗೌಡ ಪ್ರಶ್ನೆ ಕೇಳಿ, ರಾಜ್ಯದಲ್ಲಿರೋ ಆಂಬ್ಯುಲೆನ್ಸ್ಗಳಲ್ಲಿ ಅಡ್ವಾನ್ಸ್ ಚಿಕಿತ್ಸೆ ವ್ಯವಸ್ಥೆ ಇಲ್ಲ. ಆಂಬ್ಯುಲೆನ್ಸ್ನಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಗೋಲ್ಡನ್ ಅವರ್‌ನಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಸಿಕ್ತಿಲ್ಲ. 3 ಗ್ರಾಮ ಪಂಚಾಯತಿಗೆ ಒಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಬದಲಾಗಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಉತ್ತರ ನೀಡಿ, ರಾಜ್ಯದ ಆಂಬ್ಯುಲೆನ್ಸ್ನಲ್ಲಿ ಮಾನದಂಡದಂತೆ ಚಿಕಿತ್ಸೆ ವ್ಯವಸ್ಥೆ ಇದೆ. ಆಂಬ್ಯುಲೆನ್ಸ್ ಕೊರತೆಯೂ ರಾಜ್ಯದಲ್ಲಿ ಇಲ್ಲ. ಕೇಂದ್ರ ಸರ್ಕಾರದ ಮಾನದಂಡಕ್ಕಿಂತ ಜಾಸ್ತಿ ಅಂದರೆ 1,715 ಆಂಬ್ಯುಲೆನ್ಸ್ ರಾಜ್ಯದಲ್ಲಿವೆ. ಇದರಲ್ಲಿ 108 ಆಂಬ್ಯುಲೆನ್ಸ್ 715 ಇವೆ ಅಂತ ಮಾಹಿತಿ ಕೊಟ್ಟಿದ್ದಾರೆ.

ಈಗ ಖಾಸಗಿಯವರು 108 ಆಂಬ್ಯುಲೆನ್ಸ್ ನಿರ್ವಹಣೆ ಮಾಡ್ತಾ ಇದ್ದಾರೆ. ಇನ್ನು ಮುಂದೆ ಸರ್ಕಾರವೇ ಆಂಬ್ಯುಲೆನ್ಸ್ ನಿರ್ವಹಣೆ ಮಾಡಲಿದೆ. 3 ತಿಂಗಳಲ್ಲಿ ಸರ್ಕಾರವೇ ಆಂಬ್ಯುಲೆನ್ಸ್ ವ್ಯವಸ್ಥೆ ನಿರ್ವಹಣೆ ಮಾಡಲು ಶುರುಮಾಡಲಿದೆ. ಸಿಬ್ಬಂದಿಗಳ ನೇಮಕಾತಿಗೆ ಕ್ರಮ ಮಾಡ್ತೀವಿ. ಗ್ರಾಮೀಣ ಭಾಗದಲ್ಲಿ ಹೆಚ್ಚು ಆಂಬ್ಯುಲೆನ್ಸ್ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular