Tuesday, March 17, 2026
Google search engine

Homeಸ್ಥಳೀಯಕೆ.ಆರ್.ನಗರದಲ್ಲಿ ಸರ್ಕಾರಿ ಶಾಲಾ ಕಾರ್ಯಕ್ರಮ ಯಶಸ್ವಿ : ಶಾಲಾ ಮಕ್ಕಳಿಗೆ ಸಿಹಿ ಮತ್ತು ಉಚಿತ ಟ್ರಾಕ್...

ಕೆ.ಆರ್.ನಗರದಲ್ಲಿ ಸರ್ಕಾರಿ ಶಾಲಾ ಕಾರ್ಯಕ್ರಮ ಯಶಸ್ವಿ : ಶಾಲಾ ಮಕ್ಕಳಿಗೆ ಸಿಹಿ ಮತ್ತು ಉಚಿತ ಟ್ರಾಕ್ ಸೂಟ್ ವಿತರಣೆ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಆರ್ಥಿಕವಾಗಿ ಸದೃಡವಾಗಿರುವವರು ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಬೇಕೆಂದು ಹೊಸೂರು ಹಾರಂಗಿ ಉಪವಿಭಾಗದ ನಿವೃತ್ತ ಎಇಇ ಕೆ.ಬಿ.ಪ್ರಕಾಶ್ ಹೇಳಿದರು.

ಕೆ.ಅರ್.ನಗರ ತಾಲೂಕಿನ ಕಂಚಗಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7ನೇ ತರಗತಿಯ ವರೆಗಿನ ಎಲ್ಲಾ 28 ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ಗಳನ್ನ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತಿಚ್ವಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಉಚಿತ ಪುಸ್ತಕ, ಸಮವಸ್ತ್ರ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು ಅರ್ಥಿಕವಾಗಿ ಸದೃಡವಾಗಿರುವರರು ಸಹ ಸರ್ಕಾರದೊಂದಿಗೆ ಕೈ ಜೋಡಿಸಿದರೆ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ದಿಯ ಜತಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಹಕಾರಿ ಅಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಟ್ರಾಕ್ ಸೂಟ್ ದಾನಿಗಳಾದ ಶ್ರೀಮತಿ ನೇತ್ರಾವತಿ, ಇವರ ಪುತ್ರ ಶಿಕ್ಷಕ ಕೆ.ಪಿ ರವಿ ಶ್ರೀ ಪ್ರಕಾಶ್ ಕೆ ಬಿ. ಎಸ್ ಡಿ ಎಂ. ಸಿ.ಸದಸ್ಯ ಸತೀಶ್, ಸಿ ಆರ್ ಪಿ.ಬ್ಯಾಡರಹಳ್ಳಿ, ಸಿದ್ದಾಪುರ ಸಹಕಾರ ಸಂಘದ ನಿರ್ದೇಶಕ ಅನಿಲ್ ರಾಜ್ ಅವರ ಸಮ್ಮೂಖದಲ್ಲಿ ಟ್ರಾಕ್ ಸೂಟ್ ವಿತರಿಸಿ ಮಕ್ಕಳಿಗೆ ಸಿಹಿ ವಿತರಿಸಿಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ. ಅಧ್ಯಕ್ಷ ಕೆ.ಎನ್. ರಘುನಾಥ್, ಮಾಜಿ ಅಧ್ಯಕ್ಷ ಕೆ.ಟಿ.ನಾಗರಾಜು, ಉಪಾಧ್ಯಕ್ಷೆ ಡಿ.ಜೆ. ಗೀತಾ, ಸದಸ್ಯರುಗಳಾದ ರಮ್ಯಾ, ಶ್ರೀನಿವಾಸ್, ಗ್ರಾಮದ ಮುಖಂಡರಾದ ಶಂಕರೇಗೌಡ, ಶಾಲೆಯ ಮುಖ್ಯ ಶಿಕ್ಷಕ ವಿಷ್ಣು ಶೆಟ್ಟಿ. ಸಹ ಶಿಕ್ಷಕ ಸಿ.ಎಸ್.ಮಾರುತಿ , ಅತಿಥಿ ಶಿಕ್ಷಕಿ ರೋಜಾ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular