Friday, March 20, 2026
Google search engine

Homeರಾಜಕೀಯಜಿಟಿಡಿ ನಿಷ್ಠೆ ಬಗ್ಗೆ ಹೈಕಮಾಂಡ್ಗೆ ಗೊತ್ತು : ಕುಮಾರಸ್ವಾಮಿ ತೀರ್ಮಾನವೇ ಅಂತಿಮ : ಸಾರಾ ಮಹೇಶ್

ಜಿಟಿಡಿ ನಿಷ್ಠೆ ಬಗ್ಗೆ ಹೈಕಮಾಂಡ್ಗೆ ಗೊತ್ತು : ಕುಮಾರಸ್ವಾಮಿ ತೀರ್ಮಾನವೇ ಅಂತಿಮ : ಸಾರಾ ಮಹೇಶ್

ಮೈಸೂರು : ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂಬ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆಗೆ ಮಾಜಿ ಸಚಿವ ಸಾರಾ ಮಹೇಶ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜಿ.ಟಿ ದೇವೇಗೌಡರು ನಮ್ಮ ಜೊತೆಯಲ್ಲಿ ಇಲ್ಲ ಎಂದು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಎಲ್ಲಾ ವಿಚಾರವೂ ಮುಗಿದಿದೆ. ಇಷ್ಟರ ಮೇಲೂ ಮುಂದಿನ ದಿನದಲ್ಲಿ ಪಕ್ಷರ ವರಿಷ್ಟರು ಬೇರೆ ಏನಾದ್ರು ತೀರ್ಮಾನ ತೆಗೆದುಕೊಂಡರೆ ಅದಕ್ಕು ಕೂಡ ನಾವು ಬದ್ಧವಾಗಿರುತ್ತವೆ ಎಂದು ಸಾ.ರಾ.ಮಹೇಶ್ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಈಗಾಗಲೇ ಪಕ್ಷದ ಕಷ್ಟ ಮತ್ತು ಸುಖ ಎರಡರಲ್ಲೂ ಜೊತೆಯಿರುವ ಮುಖಂಡನನ್ನು ಹುಡುಕುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದು, ಅವರ ನಿರ್ಧಾರವೇ ಅಂತಿಮ. ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ನಂತರ ಜೆಡಿಎಸ್‌ಗೆ ಬಂದಿದ್ದೇನೆ. ನಾವು ಎಲ್ಲಿದ್ದೇವೊ ಆ ಪಕ್ಷ ನಮಗೆ ತಾಯಿ ಇದ್ದಂತೆ ಎಂದು ಹೇಳುವ ಮೂಲಕ ಜಿಟಿ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದರು.

ಜಿ.ಟಿ.ದೇವೇಗೌಡರು ನಮ್ಮ ಪಕ್ಷದಲ್ಲೇ ಇದ್ದು ಕೆ.ಆರ್ ನಗರಕ್ಕೆ ಬಂದು ಏನು ಮಾಡಿದರು ಎಂದು ಗೊತ್ತಿದೆ. ಸಹಕಾರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಸಹಾಯ ಮಾಡಿದ್ರು‌. ಇದೆಲ್ಲವೂ ನಮಗೆ ಗೊತ್ತಿದೆ. ಜಿ.ಟಿ.ಡಿಯ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆ ಎಲ್ಲವನ್ನೂ ಪಕ್ಷದ ಹೈ ಕಮಾಂಡ್ ಗಮನಸಿಯೇ ಮಹತ್ವದ ನಿರ್ಧಾರಗಳನ್ನ ಮಾಡಿದೆ ಎಂದರು.

RELATED ARTICLES
- Advertisment -
Google search engine

Most Popular