Saturday, March 21, 2026
Google search engine

Homeಸ್ಥಳೀಯಹೊಸೂರಿನಲ್ಲಿ ರಂಜಾನ್ ಹಬ್ಬ ಸಂಭ್ರಮ : ಶಾಂತಿ-ಸಹಬಾಳ್ವೆಯ ಸಂದೇಶ ನೀಡಿದ ರಂಜಾನ್

ಹೊಸೂರಿನಲ್ಲಿ ರಂಜಾನ್ ಹಬ್ಬ ಸಂಭ್ರಮ : ಶಾಂತಿ-ಸಹಬಾಳ್ವೆಯ ಸಂದೇಶ ನೀಡಿದ ರಂಜಾನ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಶಾಂತಿ – ಸಹಬಾಳ್ವೆಯ ಸಂಕೇತವಾಗಿರುವ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆರಚರಿಸಿದರು.

ಗ್ರಾಮದ ಹೊಸೂರು ಕೆರೆ ಬಳಿ ಇರುವ ಈದ್ಗಾ ಮೈಧಾನದಲ್ಲಿ ಒಟ್ಟುಗೂಡಿ ಮುಸ್ಲಿಂ ಭಾಂದವರು ಪರಸ್ಪರ ತಬ್ಬಿ ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಗುರುಗಳಾದ ಉಸ್ಮಾನ್ ಶರೀಫ್ ಹಾಗೂ ಆಸಿಫ್ ಅವರ ಮಾರ್ಗದರ್ಶನದಲ್ಲಿ “ಈದುಲ್-ಫಿತರ್” ಪ್ರಾರ್ಥನೆಯನ್ನು ನೆರವೇರಿಸಿದರು.
ಆನಂತರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಒಂದು ತಿಂಗಳ ಕಾಲ ಇದ್ದ ಉಪವಾಸವನ್ನು ಅಂತ್ಯ ಗೊಳಿಸಿ ನಾಡಿಗೆ ಸುಖ -ಶಾಂತಿ ನೆಮ್ಮದಿ ನೀಡಲಿ ಎಂದು ಅಲ್ಲಾವುವಿನ ಬಳಿ ಬೇಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮದ ಜಾಮಿಯಾ ಮಸೀದಿ ನೂತನ ಅಧ್ಯಕ್ಷರಾದ ಇಬ್ರಾಹಿಂ ಶರೀಫ್ ಉಪಾಧ್ಯಕ್ಷರಾದ ಸಯ್ಯದ್ ಜಮೀಲ್, ಮುಷರಫ್ ಮುಸರತ್ ಪಾಷ, ಸಯ್ಯದ್ ಸಲೀಂ, ನದೀಮ್, ಅಯಾಜ್, ಇಬ್ರಾಹಿಂ ಷರೀಪ್ , ಮುಸ್ತಪ್ಪ, ಸಲ್ಮಾನ್,ಅನೀಪ್, ನೌಷದ್ ಪಾಷ, ಅಕ್ರಂ ಪಾಷ, ಮುನ್ನಾ, ಇಶ್ರಾರ್ ಪಾಷ, ರೋಮನ್ ಷರೀಪ್, ತೌಸೀಪ್, ಅದೀಲ್, ರಫಿ, ನದೀಪ್ ಪಾಷ ನೂರೂಲ್ಲ, ಆಶ್ರಾರ್, ಕಲೀನ್, ಜಕ್ರೀಯಾ, ಉಸ್ಮಾನ್ ಸೇರಿದಂತೆ ನೂರಾರುಮಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular