Saturday, March 21, 2026
Google search engine

Homeಸ್ಥಳೀಯಬ್ಯಾಡರಹಳ್ಳಿ ಸಹಕಾರ ಸಂಘಕ್ಕೆ ಹೊಸ ಅಧ್ಯಕ್ಷರ ಆಯ್ಕೆ

ಬ್ಯಾಡರಹಳ್ಳಿ ಸಹಕಾರ ಸಂಘಕ್ಕೆ ಹೊಸ ಅಧ್ಯಕ್ಷರ ಆಯ್ಕೆ

ಕೆ.ಆ‌ರ್.ನಗರ : ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಬಿ.ಎಲ್.ಪ್ರಾಣೇಶ್ ಮತ್ತು ಉಪಾಧ್ಯಕ್ಷರಾಗಿ ಉದಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆಡಳಿತ ಕಛೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸವಿತಾ ಅವಿರೋಧ ಆಯ್ಕೆ ಪ್ರಕಟಿಸಿದರು.

ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಬಿ.ಎಂ.ಮುರಳೀಧರ,ಎಸ್.ಕೆ.ಗೌತಮ್, ರಮೇಶ್, ಕುಮಾರ್, ಉಮಾ, ಭಾಗ್ಯ, ರಮೇಶ್, ಕರಿಯಯ್ಯ, ಕೆ.ಹರೀಶ್, ಎಸ್.ಎಂ.ಶ್ರೀಕಾಂತ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್, ಸಂಘದ ಸಿಇಓ ಸಚಿನ್‌ಕುಮಾ‌ರ್, ಸಹಾಯಕ ಮಹದೇವ್ ಹಾಜರಿದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರಾದ ಚೀರ್ನಹಳ್ಳಿಶಿವಣ್ಣ, ಮಹದೇವ್, ಚಿಕ್ಕಹಾಲೇಗೌಡ, ವಿನಯ್, ಕರೀಗೌಡ ಮತ್ತಿತರರು ಅಭಿನಂದಿಸಿದರು.

RELATED ARTICLES
- Advertisment -
Google search engine

Most Popular