ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ 10 ಸಾವಿರ ಕೋಟಿ ರೂ. ಜಿಎಸ್‌ಟಿಯಿಂದ ಬರಬೇಕು ಎಂದು ಹೇಳಿರುವುದು ಸುಳ್ಳು. ಪ್ರತಿ ತಿಂಗಳು ಜಿಎಸ್‌ಟಿಯಿಂದ ರಾಜ್ಯಕ್ಕೆ ಬರುವುದು ಬರುತ್ತದೆ. ಕಾಂಗ್ರೆಸ್ ಜಿಎಸ್‌ಟಿ ಕಡಿಮೆ ಮಾಡಿರುವುದನ್ನು ಒಪ್ಪಿ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದ್ದಾರ ಎನ್ನುವುದನ್ನು ತಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಎಸ್ ಜಿಎಸ್‌ಟಿ ಯಿಂದ ಶೇ 50ರಷ್ಟು ಸಿ ಜಿಎಸ್‌ಟಿಯಿಂದ ಶೇ 40ರಷ್ಟು ಬರುತ್ತದೆ. 10 ಸಾವಿರ ಕೋಟಿ ಯಾವ ಬಾಬತ್ತಿನಲ್ಲಿ ಉಳಿದಿದೆ ಎಂಬ ವಿವರವನ್ನು ಸಿಎಂ ಸಿದ್ದರಾಮಯ್ಯ ಕೊಡಬೇಕು. ಸಿಎಂ ಮಾಹಿತಿ ನೀಡಿದರೆ ನ್ಯಾಯ ಸಮ್ಮತವಾಗಿ ರಾಜ್ಯಕ್ಕೆ ಬರುವ ಜಿಎಸ್‌ಟಿ ಹಣವನ್ನು ಪಡೆಯಲು ನಮ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನೂ ಜಿಎಸ್‌ಟಿ ದರ ಇಳಿಕೆ ಮಾಡಿರುವುದರಲ್ಲಿ ಹಣ ಬರಬೇಕೆನ್ನುವುದು ಕಾಂಗ್ರೆಸ್ ನಿಲುವು ಇದ್ದರೆ, ವಸ್ತುಗಳ ಮೇಲಿನ ದರ ಕಡಿಮೆ ಮಾಡಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವು. ಅದನ್ನು ಒಪ್ಪಿ ಕಾಂಗ್ರೆಸ್ ಜನರ ಪರ ಇದಿಯಾ ಅಥವಾ ಹೆಚ್ಚಿನ ದರದ ಪರ ಇದ್ದಾರ ಎನ್ನುವುದನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.18 ರಿಂದ ಶೇ.5 ಕ್ಕೆ ಮತ್ತು ಶೇ.5 ರಿಂದ ಶೂನ್ಯಕ್ಕೆ ಇಳಿಸಿರುವುದನ್ನು ಮರೆತಿದ್ದಾರೆ. ಇದೆಲ್ಲ ಚುನಾವಣೆಯ ಸ್ಟಂಟ್. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಮತ್ತು ಈಗಿನ ಅವಧಿಯಲ್ಲಿ ಒಟ್ಟು 5 ಲಕ್ಷ 55 ಸಾವಿರ ಕೋಟಿ ಸಾಲ ಮಾಡಿದ್ದು, ಅದು ಬಿಜೆಪಿಯದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



