Saturday, April 4, 2026
Google search engine

Homeರಾಜ್ಯಕುರುಬಾರಹಳ್ಳಿ ಸರ್ಕಾರಿ ಜಮೀನು ವಿವಾದಕ್ಕೆ ಹೊಸ ತಿರುವು :ಅಗ್ರಿಮೆಂಟ್ ರದ್ದು ಮಾಡಿದ ಜಿಲ್ಲಾಡಳಿತ

ಕುರುಬಾರಹಳ್ಳಿ ಸರ್ಕಾರಿ ಜಮೀನು ವಿವಾದಕ್ಕೆ ಹೊಸ ತಿರುವು :ಅಗ್ರಿಮೆಂಟ್ ರದ್ದು ಮಾಡಿದ ಜಿಲ್ಲಾಡಳಿತ

ಮೈಸೂರು : ನಗರದ ಕುರುಬಾರಹಳ್ಳಿ ವ್ಯಾಪ್ತಿಯ ಸರ್ವೆ ನಂ.4ಕ್ಕೆ ಸಂಬಂಧಿಸಿದ ಯು ಎಲ್ ಸಿ (ULC) ಜಮೀನು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಗ್ರಿಮೆಂಟ್ ವಿವಾದದ ನಡುವೆಯೇ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ.
ಈ ಜಮೀನು ಕುರಿತಾಗಿ ಶಾಸಕ ಶ್ರೀವತ್ಸ ಅವರು ದಾಖಲೆ ಸಮೇತವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು. ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಲು ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಿ ಗಮನ ಸೆಳೆದಿದ್ದರು.
ಈ ಬೆಳವಣಿಗೆಯಿಂದ ಎಚ್ಚೆತ್ತ ಜಿಲ್ಲಾಡಳಿತ, ತಕ್ಷಣವೇ ಪರಿಶೀಲನೆ ನಡೆಸಿ ವಿವಾದಾತ್ಮಕ ಅಗ್ರಿಮೆಂಟ್ ಅನ್ನು ರದ್ದುಪಡಿಸಿದೆ. ಅಲ್ಲದೆ, ಆ ಜಮೀನು ಸರಕಾರಿ ಸ್ವತ್ತೆಂಬುದನ್ನು ಸ್ಪಷ್ಟಪಡಿಸುವಂತೆ ಆರ್ ಟಿ ಸಿ (RTC) ದಾಖಲೆಗಳಲ್ಲಿ ಸರಕಾರಿ ಜಾಗ ಎಂದು ನಮೂದಿಸಲಾಗಿದೆ.
ಇದರೊಂದಿಗೆ ಸ್ಥಳದಲ್ಲೇ ಸರಕಾರಿ ಜಮೀನು ಎಂಬ ಫಲಕವನ್ನು ಅಳವಡಿಸುವ ಮೂಲಕ ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಜಮೀನು ವಿವಾದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದ್ದು, ಸಾರ್ವಜನಿಕ ವಲಯದಲ್ಲಿ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಪ್ರಯತ್ನಗಳನ್ನು ಕಟ್ಟಿಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

RELATED ARTICLES
- Advertisment -
Google search engine

Most Popular