Sunday, April 5, 2026
Google search engine

Homeಸ್ಥಳೀಯಡ್ರೋಣ್ ಮೂಲಕ ಜಮೀನು ಗುರುತಿಸುವ ಸರ್ವೆ ಕಾರ್ಯಕ್ಕೆ ಜಿಲ್ಲಾಧಿಕಾರಿ ಚಾಲನೆ

ಡ್ರೋಣ್ ಮೂಲಕ ಜಮೀನು ಗುರುತಿಸುವ ಸರ್ವೆ ಕಾರ್ಯಕ್ಕೆ ಜಿಲ್ಲಾಧಿಕಾರಿ ಚಾಲನೆ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನ ಬಡಾವಣೆ ನಿರ್ಮಾಣಕ್ಕೆ ಡ್ರೋಣ್ ಮೂಲಕ ಜಮೀನು ಗುರುತಿಸುವ ಸರ್ವೆ ಕಾರ್ಯಕ್ಕೆ ಶನಿವಾರ ಜಿಲ್ಲಾಧಿಕಾರಿ ಹಾಗೂ ಮೈಸೂರು ಪ್ರಾಧಿಕಾರದ ಅಧ್ಯಕ್ಷರೂ ಆದ ಜಿ.ಲಕ್ಷ್ಮೀಕಾಂತ ರೆಡ್ಡಿ ಚಾಲನೆ ನೀಡಿದರು.
2113 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಬಡಾವಣೆಗೆ 50-50 ಅನುಪಾತದಲ್ಲಿ ಜಮೀನು ಗುರುತಿಸುವ ಸರ್ವೆ ಮಾಡಲಾಗುತ್ತಿದೆ. ಮೈಸೂರಿನ ದೊಡ್ಡಮಾರಗೌಡನಹಳ್ಳಿ, ಕಮರವಳ್ಳಿ, ಬೊಮ್ಮೇನಹಳ್ಳಿ, ನಾಗವಾಲ ಗ್ರಾಮಗಳಲ್ಲಿ 50:50ರ ಅನುಪಾತದಂತೆ ಅಂದಾಜು 2113 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣವಾಗಲಿದೆ.ಹೊಸ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಟಿ.ಎಸ್.ರಕ್ಷಿತ್ ಅವರು ವಿಶೇಷ ಆಸಕ್ತಿ ವಹಿಸಿದ್ದು ಪ್ರಕ್ರಿಯೆಗೆ ಚುರುಕು ನೀಡಿದ್ದಾರೆ.
ಈ ವೇಳೆ ಡ್ರೋನ್ ಸರ್ವೆ ಕಾರ್ಯದ ಉಸ್ತುವಾರಿಗಳಾದ ಬೆಂಗಳೂರಿನ ಎ.ಆರ್.ವಿ. ಎನ್ವಿರಾನ್ ಮೆಂಟ್ ಕನ್ಸರ್ ವೇಷನ್ ಕೇರ್ ಲಿಮಿಟೆಡ್ ಉಪಾಧ್ಯಕ್ಷ ರಾಜಗುರು, ಸೂಪರಿoಡೆಂಟ್ ಇಂಜಿನಿಯರ್, ಕಾರ್ಯದರ್ಶಿಗಳು, ನಗರ ಯೋಜನಾ ಸದಸ್ಯರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ವ್ಯವಸ್ಥಾಪಕರು, ವಿಶೇಷ ರಾಜಸ್ವ ನಿರೀಕ್ಷಕರು ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಹಾಗೂ ಸ್ಥಳೀಯ ಮುಖಂಡರು ಮತ್ತು ಜಮೀನಿನ ಮಾಲೀಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular