Sunday, April 19, 2026
Google search engine

Homeಸಿನಿಮಾಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌

ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌

ಮುಂಬೈ: ಬಾಲಿವುಡ್‌ನ ಕ್ಯೂಟ್‌ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ದೀಪಿಕಾ ಮತ್ತು ರಣವೀರ್ ತಮ್ಮ ಮಗಳು ದುವಾ ಪಡುಕೋಣೆ ಸಿಂಗ್ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್‌ ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್‌ ಮಾಡಿದ್ದು, ಅಭಿಮಾನಿಗಳೊಂದಿಗೆ ಇದನ್ನ ವಿಷಯವನ್ನು ಹಂಚಿಕೊಂಡಿದ್ದಾರೆ.

2018 ರಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದರು. ಗೋಲಿಯೋಂ ಕಿ ರಾಸಲೀಲಾ ರಾಮ್-ಲೀಲಾ ಚಿತ್ರೀಕರಣದ ಸಮಯದಲ್ಲಿ ಈ ಜೋಡಿ ಡೇಟಿಂಗ್‌ ಮಾಡುತ್ತಿದ್ದ ಬಗ್ಗೆ ರೂಮರ್‌ ಹಬ್ಬಿತ್ತು.

ಹಲವು ವರ್ಷಗಳ ಡೇಟಿಂಗ್‌ ಬಳಿಕ 2015 ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2018 ರಲ್ಲಿ ವಿವಾಹವಾಗಿದ್ದರು. ಸೆಪ್ಟೆಂಬರ್ 2024 ರಲ್ಲಿ ತಮ್ಮ ಮೊದಲ ಮಗು ಮಗಳು ದುವಾಳನ್ನು ಸ್ವಾಗತಿಸಿದ್ದರು. ಇತ್ತಿಚಿಗಷ್ಟೇ ತಮ್ಮ ಮೊದಲ ಮಗುವಿನ ಮುಖವನ್ನು ಪೋಸ್ಟ್‌ ಮಾಡಿದ್ದರು.

ಬಾಲಿವುಡ್‌ನ ಸಕ್ಸ್‌ಸ್‌ಫುಲ್‌ ನಟಿಯರ ಪೈಕಿ ಒಬ್ಬರಾದ ದೀಪಿಕಾ, ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಜೊತೆಗೆ ಕಿಂಗ್ ಚಿತ್ರದಲ್ಲಿ ಮುಂದೆ ಬಣ್ಣ ಹಚ್ಚಲಿದ್ದಾರೆ. ಅಲ್ಲು ಅರ್ಜುನ್‌ ಅವರ ರಾಕಾ ಚಿತ್ರದಲ್ಲಿಯೂ ನಟಿಸುತ್ತಾರೆ ಎಂದು ಹೇಳಲಾಗಿದೆ.

ಬಾಲಿವುಡ್‌ನಲ್ಲಿ ಧೂಳೆಬ್ಬಿಸಿರುವ ರಣವೀರ್‌ ಸಿಂಗ್‌ ನಟನೆಯ ಧುರಂಧರ್‌ ಚಿತ್ರ ಮಾರ್ಚ್ 2026ರ ಹೊತ್ತಿಗೆ ₹1500 ಕೋಟಿ ಕ್ಲಬ್ ಸೇರಿದ್ದು, ಹಲವು ದಾಖಲೆಗಳನ್ನು ಉಡೀಸ್‌ ಮಾಡಿದೆ. ‘ಧುರಂದರ್‌ 2: ದಿ ರಿವೆಂಜ್’ ಸಿನಿಮಾ ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ ಇದು ಸಹ ಬಾಕ್ಸ್‌ ಆಫಿಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

RELATED ARTICLES
- Advertisment -
Google search engine

Most Popular