Tuesday, April 21, 2026
Google search engine

Homeಕ್ರೀಡೆಜಿಟಿ ಬ್ಯಾಟರ್‌ಗಳ ವೈಫಲ್ಯ: ಸೋಲಿಗೆ ಬೌಲರ್‌ಗಳತ್ತ ಬೆರಳು ತೋರಿಸಿದ ಶುಭಮನ್ ಗಿಲ್!

ಜಿಟಿ ಬ್ಯಾಟರ್‌ಗಳ ವೈಫಲ್ಯ: ಸೋಲಿಗೆ ಬೌಲರ್‌ಗಳತ್ತ ಬೆರಳು ತೋರಿಸಿದ ಶುಭಮನ್ ಗಿಲ್!

ಅಹ್ಮದಾಬಾದ್‌ : ಐಪಿಎಲ್ 2026ರ ಸೋಮವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 99 ರನ್‌ ಗಳ ಭರ್ಜರಿ ಜಯ ಸಾಧಿಸಿದೆ. ತಿಲಕ್ ವರ್ಮಾ ಅವರ ಅಮೋಘ ಶತಕದ ನೆರವಿನಿಂದ ಮುಂಬೈ 199 ರನ್ ಪೇರಿಸಿತ್ತು. ಆದರೆ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 15.5 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಆಯಿತು.

ಸೋಲಿನ ನಂತರ ಗಿಲ್ ಹೇಳಿದ್ದೇನು?

ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚುವರಿ ರನ್ ಬಿಟ್ಟುಕೊಟ್ಟಿದ್ದು : “ನಾವು ಮಿಡಲ್ ಓವರ್‌ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟೆವು. ಇಂತಹ ಪಿಚ್‌ ನಲ್ಲಿ 160-170 ರನ್ ಸವಾಲಿನ ಮೊತ್ತವಾಗುತ್ತಿತ್ತು” ಎಂದು ಗಿಲ್ ಅಭಿಪ್ರಾಯಪಟ್ಟಿದ್ದಾರೆ.

ಬೌಲಿಂಗ್ ಲೆಂತ್ ಸಮಸ್ಯೆ: ಪಿಚ್ ನಿಧಾನಗತಿಯಲ್ಲಿತ್ತು, ಆದರೆ ನಮ್ಮ ಬೌಲರ್‌ಗಳು ಸರಿಯಾದ ಜಾಗದಲ್ಲಿ ಚೆಂಡನ್ನು ಹಾಕಲಿಲ್ಲ. ನಿರಂತರವಾಗಿ ಉತ್ತಮ ಲೆಂತ್ ಕಾಪಾಡಿಕೊಳ್ಳುವಲ್ಲಿ ನಾವು ವಿಫಲರಾದೆವು ಎಂದು ಅವರು ಹೇಳಿದರು.

ಬ್ಯಾಟಿಂಗ್ ಸುಧಾರಿಸಬೇಕಿತ್ತು: ಇಬ್ಬನಿ (Dew) ಇದ್ದ ಕಾರಣ ಬ್ಯಾಟಿಂಗ್ ಮಾಡಲು ಪರಿಸ್ಥಿತಿ ಪೂರಕವಾಗಿತ್ತು. ಆದರೂ ನಮ್ಮ ಬ್ಯಾಟರ್‌ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಗುಜರಾತ್ ತಂಡದ ಕಳಪೆ ಬ್ಯಾಟಿಂಗ್ ಕಾರ್ಡ್:

ಟಾಪ್-5 ಬ್ಯಾಟರ್‌ಗಳು ಅತಿ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು

ಸಾಯಿ ಸುದರ್ಶನ್: 0,ಶುಭ್‌ಮನ್ ಗಿಲ್: 14, ಜೋಸ್ ಬಟ್ಲರ್: 5, ಗ್ಲೆನ್ ಫಿಲಿಪ್ಸ್: 6,ವಾಷಿಂಗ್ಟನ್ ಸುಂದರ್: 26, ರಾಹುಲ್ ತೇವಾಟಿಯ (ಇಂಪ್ಯಾಕ್ಟ್ ಪ್ಲೇಯರ್): 8

ತಿಲಕ್ ವರ್ಮಾ ಅಬ್ಬರ – ಪಂದ್ಯ ಶ್ರೇಷ್ಠ

ಕಳೆದ ಕೆಲವು ಪಂದ್ಯಗಳಿಂದ ಫಾರ್ಮ್ ಸಮಸ್ಯೆಯಲ್ಲಿದ್ದ ತಿಲಕ್ ವರ್ಮಾ ಅದ್ಭುತವಾಗಿ ಪುನರಾಗಮನ ಮಾಡಿದರು. ಕೇವಲ 45 ಎಸೆತಗಳಲ್ಲಿ ಅಜೇಯ 101 ರನ್ ಸಿಡಿಸಿದ ಅವರಿಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ನೀಡಲಾಯಿತು.

“ಇದು ಒಂದು ಸಣ್ಣ ಹಿನ್ನಡೆ ಅಷ್ಟೆ, ಮುಂದಿನ ಪಂದ್ಯಗಳಲ್ಲಿ ನಾವು ಗೆಲುವಿನ ಹಾದಿಗೆ ಮರಳುವ ಭರವಸೆ ಇದೆ” ಎಂದು ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸಿಸ್)‌

RELATED ARTICLES
- Advertisment -
Google search engine

Most Popular