Sunday, April 26, 2026
Google search engine

Homeಕ್ರೀಡೆಹೆಚ್ಚಿನ ಕ್ಯಾಚ್ ಕೈಬಿಟ್ಟಿದ್ದೇ ಸೋಲಿಗೆ ಕಾರಣ: ಎಸ್‌ ಆರ್‌ ಹೆಚ್ ವಿರುದ್ಧದ ಪಂದ್ಯದ ಬಗ್ಗೆ ರಿಯಾನ್...

ಹೆಚ್ಚಿನ ಕ್ಯಾಚ್ ಕೈಬಿಟ್ಟಿದ್ದೇ ಸೋಲಿಗೆ ಕಾರಣ: ಎಸ್‌ ಆರ್‌ ಹೆಚ್ ವಿರುದ್ಧದ ಪಂದ್ಯದ ಬಗ್ಗೆ ರಿಯಾನ್ ಪರಾಗ್ ಅಸಮಾಧಾನ

ಜೈಪುರ : ಐಪಿಎಲ್ 2026ರ 36ನೇ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ 5 ವಿಕೆಟ್‌ಗಳ ಸೋಲು ಕಂಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 228 ರನ್‌ಗಳ ಬೃಹತ್ ಮೊತ್ತ ಪೇರಿಸಿದರೂ, ಹೈದರಾಬಾದ್ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ತನ್ನ ನಾಯಕತ್ವದಲ್ಲಿ ತಂಡಕ್ಕಾದ ಈ ಸೋಲಿನ ಬಗ್ಗೆ ಮಾತನಾಡಿದ ರಿಯಾನ್ ಪರಾಗ್, ಸೋಲಿಗೆ ಪ್ರಮುಖ ಕಾರಣಗಳನ್ನು ವಿವರಿಸಿದ್ದಾರೆ.

ಕೈಬಿಟ್ಟ ಕ್ಯಾಚ್‌ಗಳು ಮುಳುವಾದವು

ಪಂದ್ಯದ ನಂತರ ಮಾತನಾಡಿದ ಪರಾಗ್, “ನಾವು ರೂಪಿಸಿದ ಯೋಜನೆಗಳನ್ನು ಕೌಶಲ್ಯದ ಮಟ್ಟಿಗೆ ಸರಿಯಾಗಿಯೇ ಜಾರಿಗೊಳಿಸಿದ್ದೆವು. ಆದರೆ ಫೀಲ್ಡಿಂಗ್‌ನಲ್ಲಿ ನಾವು ಅತಿಯಾದ ಕ್ಯಾಚ್‌ಗಳನ್ನು ಕೈಬಿಟ್ಟೆವು. ಅಭಿಷೇಕ್ ಶರ್ಮಾ ಅವರಂತಹ ಗುಣಮಟ್ಟದ ಬ್ಯಾಟರ್‌ ಗಳಿಗೆ ಜೀವದಾನ ನೀಡುವುದು ಅಪಾಯಕಾರಿ. ಅವರು ಆ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು. ಮೈದಾನದಲ್ಲಿ ನಾವು ಇನ್ನೂ ಉತ್ತಮ ಪ್ರದರ್ಶನ ನೀಡಬೇಕಿತ್ತು,” ಎಂದು ಬೇಸರ ವ್ಯಕ್ತಪಡಿಸಿದರು.

15 ರನ್‌ ಗಳ ಕೊರತೆ

228 ರನ್ ಗಳಿಸಿದರೂ ಸಹ ತಂಡವು 10-15 ರನ್ ಕಡಿಮೆ ಮಾಡಿದೆ ಎಂದು ಪರಾಗ್ ಅಭಿಪ್ರಾಯಪಟ್ಟಿದ್ದಾರೆ. “ಹೈದರಾಬಾದ್ ಬೌಲರ್‌ಗಳು 18 ಮತ್ತು 19ನೇ ಓವರ್‌ಗಳಲ್ಲಿ ಅದ್ಭುತವಾಗಿ ಯಾರ್ಕರ್ ಎಸೆದರು. ಅಲ್ಲಿ ನಮಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ನಾವು ಇನ್ನೂ 15 ರನ್ ಹೆಚ್ಚು ಗಳಿಸಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು,” ಎಂದರು.

ಸ್ಪಿನ್ನರ್‌ಗಳನ್ನು ಬಳಸದಿದ್ದಕ್ಕೆ ಕಾರಣವೇನು?

ಪಂದ್ಯದಲ್ಲಿ ಸ್ಪಿನ್ನರ್‌ ಗಳನ್ನು ಹೆಚ್ಚು ಬಳಸದ ಬಗ್ಗೆ ಉತ್ತರಿಸಿದ ಪರಾಗ್, “ಇಬ್ಬರು ಎಡಗೈ ಬ್ಯಾಟರ್‌ಗಳು ಕ್ರೀಸ್‌ನಲ್ಲಿದ್ದ ಕಾರಣ ನಾನು ಮತ್ತು ಡಾನ್ ವಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿತ್ತು. ಕ್ಲಾಸೆನ್ ಬಂದ ನಂತರ ರವಿ ಮತ್ತು ಜಡ್ಡು ಅವರನ್ನು ಕರೆತರಲು ಯೋಜಿಸಿದ್ದೆ. ಆದರೆ ಪಿಚ್ ಸ್ಪಿನ್ನರ್‌ ಗಳಿಗೆ ಪೂರಕವಾಗಿರಲಿಲ್ಲ. ಹೀಗಾಗಿ ಕೇವಲ ನಾಲ್ಕು ಓವರ್‌ ಗಳಷ್ಟೇ ಸ್ಪಿನ್ ಬೌಲಿಂಗ್ ಮಾಡಿಸಿದೆವು,” ಎಂದು ಸ್ಪಷ್ಟಪಡಿಸಿದರು

RELATED ARTICLES
- Advertisment -
Google search engine

Most Popular