Sunday, April 26, 2026
Google search engine

Homeಕ್ರೀಡೆಐಪಿಎಲ್ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ : ಒಂದೇ ದಿನದಲ್ಲಿ ದಾಖಲಾದವು 986 ರನ್, 59...

ಐಪಿಎಲ್ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ : ಒಂದೇ ದಿನದಲ್ಲಿ ದಾಖಲಾದವು 986 ರನ್, 59 ಸಿಕ್ಸರ್!

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಏಪ್ರಿಲ್ 25, ಶನಿವಾರದಂದು ಕ್ರಿಕೆಟ್ ಲೋಕ ಹಿಂದೆಂದೂ ಕಾಣದ ಅದ್ಭುತಕ್ಕೆ ಸಾಕ್ಷಿಯಾಯಿತು. ಕಳೆದ 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮುರಿಯಲಾಗದಿದ್ದ ಎಲ್ಲಾ ದಾಖಲೆಗಳು ಒಂದೇ ದಿನದಲ್ಲಿ ಧೂಳೀಪಟವಾಗಿವೆ. ಅಂದು ನಡೆದ ಎರಡು ಪಂದ್ಯಗಳಲ್ಲಿ ರನ್‌ಗಳ ಮಳೆಯೇ ಸುರಿಯಿತು.

ಪಂಜಾಬ್ ಕಿಂಗ್ಸ್‌ನಿಂದ ಐತಿಹಾಸಿಕ ರನ್ ಚೇಸ್

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಮೊದಲ ಬ್ಯಾಟಿಂಗ್ ಮಾಡಿದ ದೆಹಲಿ ಕ್ಯಾಪಿಟಲ್ಸ್, ಕೆ.ಎಲ್. ರಾಹುಲ್ ಅವರ ಸ್ಫೋಟಕ 152 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 264 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಯಶಸ್ವಿ ರನ್ ಚೇಸ್ ದಾಖಲಿಸಿತು. ಪಂಜಾಬ್ ತಂಡ ಕೇವಲ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಜಯಭೇರಿ ಬಾರಿಸಿತು.

ಹೈದರಾಬಾದ್ ಆರ್ಭಟ

ಸಂಜೆ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಿದವು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, ವೈಭವ್ ಸೂರ್ಯವಂಶಿ ಅವರ ಮಿಂಚಿನ ಶತಕದ (37 ಎಸೆತಗಳಲ್ಲಿ 103 ರನ್) ನೆರವಿನಿಂದ 6 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು.

ಇದನ್ನು ಬೆನ್ನಟ್ಟಿದ ಹೈದರಾಬಾದ್ ತಂಡ, 18.3 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು.

ಪುಡಿಯಾದ ಹಳೆಯ ದಾಖಲೆಗಳು

ಶನಿವಾರದ ಈ ಎರಡು ಪಂದ್ಯಗಳಿಂದ ಒಟ್ಟು 986 ರನ್‌ ಗಳು ಹರಿದು ಬಂದವು. ದೆಹಲಿಯಲ್ಲಿ 529 ರನ್ ಮತ್ತು ಜೈಪುರದಲ್ಲಿ 457 ರನ್‌ ಗಳು ದಾಖಲಾದವು.

ಹಳೆಯ ದಾಖಲೆ: ಈ ಹಿಂದೆ 2024ರ ಏಪ್ರಿಲ್ 27ರಂದು ಒಂದೇ ದಿನದಲ್ಲಿ ದಾಖಲಾಗಿದ್ದ 899 ರನ್‌ಗಳ ದಾಖಲೆ ಈಗ ಇತಿಹಾಸ ಪುಟ ಸೇರಿದೆ.

ಸಿಕ್ಸರ್‌ ಗಳ ಸುರಿಮಳೆ : ಅಂದು ಒಂದೇ ದಿನ ದಾಖಲೆಯ 59 ಸಿಕ್ಸರ್‌ಗಳು ಸಿಡಿದವು (ಹಳೆಯ ದಾಖಲೆ 53 ಸಿಕ್ಸರ್). ಅಷ್ಟೇ ಅಲ್ಲದೆ, ಇಡೀ ದಿನದಲ್ಲಿ ಒಟ್ಟು 96 ಬೌಂಡರಿಗಳು ದಾಖಲಾಗಿವೆ.

ಒಟ್ಟಾರೆಯಾಗಿ 2026ರ ಏಪ್ರಿಲ್ 25 ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಎಂದಿಗೂ ಮರೆಯಲಾಗದ ರನ್‌ ಗಳ ದಿನವಾಗಿ ಮಾರ್ಪಟ್ಟಿತು.

RELATED ARTICLES
- Advertisment -
Google search engine

Most Popular